|| ರಾಘವೇಂದ್ರ ಭಜನೆ ||
ಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ
ಎಲ್ಲಿ ನಿನ್ನ ನೆನೆವರೋ ಅಲ್ಲೇ ದೇವಾಲಯ ।।
ಪೂಜೆ ನಡೆವ ಮನೆಗಳೇ ಎಂದೂ ಪರಮಪಾವನ
ಧ್ಯಾನಗೈವ ಮನೆಗಳೇ ನಿನ್ನಾ ಬೃಂದಾವನ
ನಿನ್ನ ಅರಿತ ಹೃದಯವೇ ದೇವನಿರುವ ಮಂದಿರ
ನಿನ್ನ ಬೆರೆವ ಭಾಗ್ಯವೇ ನಿತ್ಯ ಸತ್ಯ ಸುಂದರ ।।
ನಿನ್ನ ಕಾಣುವಾಸೆಯೇ ಪೂರ್ವ ಜನ್ಮ ಪುಣ್ಯವು
ನಿನ್ನ ನಂಬಿ ನಡೆವುದೇ ಬಾಳಿನಲ್ಲಿ ಭಾಗ್ಯವು
ನಿನ್ನ ನಾಮಸ್ಮರಣೆಯೇ ದಿವ್ಯ ವೇದ ಮಂತ್ರವು
ನಿನ್ನ ನಿತ್ಯ ಸೇವೆಯೇ ಮುಕ್ತಿ ಪಡೆವ ತಂತ್ರವು ।।
0 ಕಾಮೆಂಟ್‌ಗಳು