ಪರಶಿವ ಸತಿ ನಿನ್ನ ಪಾದವ ನಂಬಿದೆ - Parashiva Sathi Ninna Paadava Nambide

||ಪಾರ್ವತಿ ಸ್ತುತಿ ||

ರಾಗಮಾಲಿಕೆ ಕೃತಿ




ರಾಗ: ಆನಂದಭೈರವಿ

ಪರಶಿವ ಸತಿ ನಿನ್ನ ಪಾದವ ನಂಬಿದೆ||

ಕರುಣದಿ ಕಾಪಾಡಮ್ಮಾ ದೇವಿ||ಪ ||

ಪರಿ ಪರಿ ವಿಧದಿ ನಿನ್ನ ಭಕ್ತರು ಪೊಗಳಲು

ಅರಿಯದ ನಾ ನಿನ್ನ ಏನೆಂದು ಪೊಗಳಲಮ್ಮ||ಅ. ಪ.||


ನೀನೀ ಸಮಯದಿ ಮರೆತೆಯಾದರೆ

ನಾನೀ ಜಗದೊಳು ಯಾರನು ಪೇಳಲಿ 

ಏನಿದು ಈ ಮೌನ ದೀನಳ ಪೊರೆಯಳು||

||೧||

ಆನಂದ ಭೈರವಿ ಆದರ ತೋರಮ್ಮ

ರಾಗ: ಕಲ್ಯಾಣಿ

ಎಲ್ಲಾ ದುರಿತಗಳು ಗಿರಿಗಳಂತಿದ್ದರು||

ಹುಲ್ಲಾಗುವುದು ನಿನ್ನ ಕಣ್ಣೋಟದಿ ||

ಕಲ್ಯಾಣಿಯೇ ಕರುಣಾಕರಿ ಶಿವೇ ||

ಉಲ್ಲಾಸಿಯೇ ಉಮೇ ನಿನ್ನ ನಂಬಿದೆ ನಮ್ಮ||೨||


ರಾಗ: ಬಾಗೇಶ್ರೀ

ನಾಗೇಶ್ವರಿ ಎಂದು ನಮಿಸುವೆ ತಾಯೆ||

ಭಾಗೇಶ್ವರಿ ತಾಯೆ ಬಂದಿಂದು ಕೃಪೆ ತೋರು||

ಭಾಗೇಶ್ವರಿ ತಾಯೆ ಪಾರ್ವತಿಯೇ ಅಮ್ಮ||

ಲೋಕೇಶ್ವರಿ ನೀನೇ ರಕ್ಷಿಸ ಬೇಕಮ್ಮ||೩||


ರಾಗ: ರಂಜನಿ

ಅಂಜನ ಲೋಚನೆ ಅಂಬಿಕೆ ಶಿವೆಯೇ||

ಕುಂಜರ ಮುಖ ಮಾತೆ ಮಂಗಳ ದಾತೇ||

ಅಂಜುತ ಬಂದಿಹೆ ಆಶ್ರಯ ಬಯಸಿ||

ರಂಜನಿಯೇ ಎನ್ನ ರಕ್ಷಿಸ ಬೇಕಮ್ಮ||೪||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು