|| ಸಂಕ್ಷಿಪ್ತ ಶ್ರೀ ಗುರು ಚರಿತ್ರೆ ||
ಸರಸ್ವತಿ ಗಂಗಾಧರ ಗುರುಭಕ್ತನಿಗೊಲಿದು
ಬಂದನಾ ಶ್ರೀ ದತ್ತ |
ಪರಿಪರಿತಾಪವ ಕೇಶವ ಕಳೆಯುತ
ನಿಜಸುಖವಿತ್ತನು ಶ್ರೀ ದತ್ತ||
ಕಷ್ಟದಿಂದ ಕಂಗೆಡುವ ಬಾಲಕನ ಕಂಡ
ಸಿದ್ಧಮುನಿ ಶ್ರೀ ದತ್ತ |
ದುಷ್ಟ ಭಾವನೆಯ ಬಿಟ್ಟು ಭಜಿಸಿದರೆ ಕೊಟ್ಟು
ಕಾಯುವನು ಶ್ರೀ ದತ್ತ ||
ನಿಂತು ನುಡಿವ ಯೋಗೀಂದ್ರ ನಂಘ್ರಯನು
ಪಿಡಿದು ಕೇಳಿದ ಶ್ರೀ ದತ್ತ
ಇಂತು ಕರುಣೆಯದು ಕೊನೆಗೆ ಬಂದಿತೇ
ಪಾಲಿಸು ಪಾಲಿಸು ಶ್ರೀ ದತ್ತ ||
ಆಲಿಸು ಕುವರನೆ ಶ್ರೀ ಗುರುಚರಿತೆಯ
ಭವತಾರಕನ ಶ್ರೀ ದತ್ತ |
ಕೇಳುವ ಎಲ್ಲರ ಹಸಿವನು ಹಿಂಗಿಸಿ ಹರುಷದಿ
ಕಾಯುವ ಶ್ರೀ ದತ್ತ ||
ಇವನೇ ದತ್ತನು ಅನಸೂಯಾತ್ಮಜ
ವಿಶ್ವನಿಯಾಮಕ ಶ್ರೀ ದತ್ತ |
ಭವತಿಯ ನೆವದಲಿ ವಿಪ್ರನ ಮಡದಿಗೆ
ಸುತನಾದನು ಶ್ರೀ ದತ್ತ ||
ಶ್ರೀ ಪಾದ ಶ್ರೀವಲ್ಲಭ ನಾಮದಿ
ಕುಲ ಉದ್ಧರಿಸಿದ ಶ್ರೀ ದತ್ತ |
ಕಾಪಿಡೆ ನಡೆದನು ಭಾರತ ಜನವನು
ಯಾತ್ರೆಯ ನೆವದಿಂ ಶ್ರೀ ದತ್ತ ||
ತೀರ್ಥಕ್ಷೇ ತ್ರಗಳ ಸುತ್ತಿ ಪತಿತರನು
ಪಾವನಗೊಳಿಸಿದ ಶ್ರೀ ದತ್ತ |
ಸಾರ್ಥವಾದ ಗೋಕರ್ಣನ ನೋಡುತ
ಕುರುವದಿ ನಿಂತನು ಶ್ರೀ ದತ್ತ ||
ಮಂದಮತಿ ಅಂಬಾ ಕುಮಾರನಿಗೆ
ಜ್ಞಾನದಾತನು ಶ್ರೀ ದತ್ತ |
ಮಂದವಾಸರದ ಪ್ರದೋಷ ಪೂಜೆಯ
ಮಹಿಮೆಯ ಹೇಳಿದ ಶ್ರೀ ದತ್ತ ||
ಅಗಸಗೆ ಮುಂದಣ ಜನುಮದಿ
ರಾಜ್ಯದ ಭೋಗವನಿತ್ತನು ಶ್ರೀ ದತ್ತ |
ಅಗಲದಂತಿರಲು ವಲ್ಲಭೇಶನ
ಸಂಕಟಕಳೆದನು ಶ್ರೀ ದತ್ತ ||
ವಚನದಂತೆ ಅಂಬಾ-ಮಾಧವರಿಗೆ
ಬಾಲಕನಾದನು ಶ್ರೀ ದತ್ತ |
ಉಚಿತಸಮಯ ಬರೆ ನಾಲ್ಕೂ ವೇದದ
ಸಾರವ ಹೇಳಿದ ಶ್ರೀ ದತ್ತ ||
ಅವಳೀ ತನಯರ ತಾಯಿಗೆ ಕರುಣಿಸಿ
ಕಾಶಿಗೆ ಬಂದನು ಶ್ರೀ ದತ್ತ |
ನವ ಸಂವತ್ಸರವಿರೆ ಸನ್ಯಾಸವ
ಸ್ವೀಕರಿಸಿದನು ಶ್ರೀ ದತ್ತ |
ಮೂವತ್ತ ಬುಧವ ದಾಟಿ ಬಂದು
ತಾಯ್ತಂದೆಯ ನೋಡಿದ ಶ್ರೀ ದತ್ತ |
ಆವುದನೆಲ್ಲವ ನೀಡಿ ಹರಸುತ
ಪಯಣವ ಬೆಳೆಸಿದ ಶ್ರೀ ದತ್ತ ||
ಉದರಶೂಲೆಯ ವಿಪ್ರನ ಜನ್ಮವನ್ನುಳಿಸಿ
ಕಾಯ್ದನು ಶ್ರೀ ದತ್ತ |
ಮುದದಿ ಪೂಜಿಸುವ ಸತಿ ಪತಿಯರನು
ಕಂಡು ನಲಿದನು ಶ್ರೀ ದತ್ತ ||
ಸಾಯನ ದೇವನ ಸಾವನು ತಪ್ಪಿಸಿ
ಯವನ ನಂಜಿಸಿದ ಶ್ರೀ ದತ್ತ |
ಧ್ಯೇಯ ಸಾಧನೆಗೆ ಯಾತ್ರೆಯ ಮಾಡಲು
ಶಿಷ್ಯನ ಕಳುಹಿದ ಶ್ರೀ ದತ್ತ ||
ಗುಪ್ತವಾಗಿರಲು ಗುರು ನಿಂದಕನಿಗೆ
ಬೋಧನೆ ಮಾಡಿದ ಶ್ರೀ ದತ್ತ |
ಸುಪ್ತಚೇತನೆಯ ಚಾಲಿಪ ಶಕ್ತಿಯು
ಗುರುವಿಗಿದೆಂದನು ಶ್ರೀ ದತ್ತ ||
ದೇವಿಯ ಬಳಿಯಲಿ ನಾಲಿಗೆ ಕೊಯ್ದಗೆ
ಮತಿಯ ಪಾಲಿಸಿದ ಶ್ರೀ ದತ್ತ |
ಭಾವದಿ ಭಿಕ್ಷೆಯನೀಡಿದ ವಿಪ್ರಗೆ
ಸಂಚಿತ ತೋರಿದ ಶ್ರೀ ದತ್ತ ||
ಯೋಗಿನಿಯರ ಸಹವಾಸದಿ ಇರುವನು
ನರಸಿಂಹ ಸರಸ್ವತಿ ಶ್ರೀ ದತ್ತ |
ಸಾಗಿ ಶೋಧಿಸಿದ ಅಂಬಿಗರವನಿಗೆ
ಗುಪಿತವ ಹೇಳಿದ ಶ್ರೀ ದತ್ತ ||
ಹರಕೆಯ ಕುವರನ ಹರಣವ ಬರೆಸಿದ
ಔದುಂಬರದಿ ಶ್ರೀ ದತ್ತ |
ಬರುತ ಅಮರಜಾ ಭೀಮಾಸಂಗಮ
ಕ್ಷೇತ್ರದಿ ತಂಗಿದ ಶ್ರೀ ದತ್ತ ||
ಬರಡೆಮ್ಮೆಯನು ಕರೆಯಿಸಿ ಜನರಿಗೆ
ಕೌತುಕ ತೋರಿದ ಶ್ರೀ ದತ್ತ |
ಹರುಷದಿ ಕರೆಯಲು ಗಾಣ್ಗಾಪುರದಲಿ
ನೆಲಸಬಂದನಾ ಶ್ರೀ ದತ್ತ ||
ದೂರಮಾಡಿದ ಬ್ರಹ್ಮರಾಕ್ಷಸನ
ಕುಮಸಿಗೆ ನೆರೆದನು ಶ್ರೀ ದತ್ತ |
ತೋರಿದ ತ್ರಿವಿಕ್ರಮಾರತಿಗೆ
ವಿಶ್ವ ರೂಪಾವನು ಶ್ರೀ ದತ್ತ ||
ವಾದಿಸಬಂದಿಹ ಸೊಕ್ಕಿದ ವಿಪ್ರನ
ಗರ್ವ ಕಳೆದನು ಶ್ರೀ ದತ್ತ |
ವೇದದ ಸಾರ ನಿರೂಪಣ ಮಾಡುತ
ಅದ್ಭುತ ಹೇಳಿದ ಶ್ರೀ ದತ್ತ ||
ತಿಳಿಯದ ವಿಪ್ರರು ವಾದವ ಬೆಳೆಸಲು
ಹೊಲೆಯನ ಕರೆದನು ಶ್ರೀ ದತ್ತ |
ಬಳಿದು ಭಸ್ಮವ ಕೃಪೆಯನು ಮಾಡುತ
ವಾದಿಸ ಹೇಳಿದ ಶ್ರೀ ದತ್ತ ||
ಪಾಪಿಗಳಾಗಲೇ ಅಂಜಿ ನಡುಗಿದರು
ಶಾಪವ ಕೊಟ್ಟನು ಶ್ರೀ ದತ್ತ |
ಪಾಪ ಪುಣ್ಯದ ಸಂಚಿತ ಕರ್ಮದ
ಫಲವನುಸುರಿದ ಶ್ರೀ ದತ್ತ ||
ಭಸ್ಮ ಮಹಾತ್ಮೆಯ ತಿಳಿ ಹೇಳಿದನು
ವಾಮ ದೇವನು ಶ್ರೀ ದತ್ತ |
ವಿಸ್ಮಯಗೊಂಡಿಹ ರಾಕ್ಷಸ ಜನೆಮಕೆ
ಮೋಕ್ಷವನಿತ್ತನು ಶ್ರೀ ದತ್ತ ||
ಸತಿಸಾವಿತ್ರಿಯ ಪತಿ ಮೃತನಾಗಲು
ಅಳುವುದು ಕಂಡನು ಶ್ರೀ ದತ್ತ |
ಸತಿಧರ್ಮದ ಇತಿಹಾಸವ ಹೇಳುತ
ಸತಿ ಹೋಗೆಂದನು ಶ್ರೀ ದತ್ತ ||
ಹೋಗುವ ಮುನ್ನ ಕ್ಷೇತ್ರಕೆ ಬಂದ
ಬಾಲೆಯ ಹರಸಿದ ಶ್ರೀ ದತ್ತ |
ಹೋಗದು ಜೀವ ಎನ್ನಯ ನುಡಿಯಿದು
ಮಂಗಳವೆಂದನು ಶ್ರೀ ದತ್ತ ||
ಚೇತರಿಸಿತು ಶವ ಅಭಿಷಿತ ಜಲದಿಂ
ಪ್ರೋಕ್ಷಣೆ ಮಾಡಲು ಶ್ರೀ ದತ್ತ |
ಆತುರದಿಂ ದಂಪತಿಗಳು ಬಾಗಲು
ಆಶೀರ್ವದಿಸಿದ ಶ್ರೀ ದತ್ತ ||
ರುದ್ರಾಧ್ಯಾಯದ ರುದ್ರಾಕ್ಷಿಯ ಕಥೆ
ಹೇಳಿದನವರಿಗೆ ಶ್ರೀ ದತ್ತ |
ಭದ್ರೆ ಸೀಮಂತಿನಿ ಮಾಡಿದ ಚಂದಿರ
ವಾರದ ವ್ರತವನ್ನು ಶ್ರೀ ದತ್ತ ||
ಬೆಳಗಿನಿಂದಲಿ ರಾತ್ರಿಯವರೆಗಿನ
ವಿಹಿತಕರ್ಮವನು ಶ್ರೀ ವತ್ತ |
ತಿಳಿಪಡಿಸಿದ ವಿಪ್ರನ ಮಡದಿಗೆ
ಪರಾನ್ನದೋಷವ ಶ್ರೀ ದತ್ತ ||
ಮೂವರ ಭೋಜನ ಆಕ್ಷಯವಾಗಿಸಿ
ದಾಸಗೊಲಿದನು ಶ್ರೀ ದತ್ತ |
ಸಾವ ಸಮೀಪದ ಗಂಗಾ ಮಾತೆಗೆ
ಮಕ್ಕಳ ಕೊಟ್ಟನು ಶ್ರೀ ದತ್ತ ||
ಒಣಮರ ಚಿಗುರಿಸಿ ನರಹರಿ
ವಿಪ್ರನ ಕುಷ್ಠವ ಕಳೆದನು ಶ್ರೀ ದತ್ತ |
ಅಣುರದಿ ಅಂಜಿಕೆ ತೋರುತ ಶಿಷ್ಕನ
ಪರೀಕ್ಷೆ ಮಾಡಿದ ಶ್ರೀ ದತ್ತ ||
ಕಾಶೀಕ್ಷೇತ್ರದ ಮಹಿಮೆಯ ತೋರಿದ
ಸಾಯನ ದೇವಗೆ ಶ್ರೀ ದತ್ತ |
ತೋಷದಲವನು ಹಾಡುತಲೆಂದನು
ಹರಿಹರಬ್ರಹನ್ಮು ಶ್ರೀ ದತ್ತ ||
ಅನಂತನಾವ್ರತ ಮಹಿಮೆಯ ಹೇಳುತ
ವ್ರತವ ಮಾಡಿಸಿದನು ಶ್ರೀ ದತ್ತ |
ಅನಂತ ಕೋಟಿಯು ಅನಂತ ರೂಪನು
ಅನಂತ ಮಹಿಮನು ಶ್ರೀ ದತ್ತ ||
ನೇಕಾರಗೆ ಶ್ರೀ ಶೈಲದ ಯಾತ್ರೆಯ
ಮಾಡಿಸಿದನು ತಾ ಶ್ರೀ ದತ್ತ |
ಸಾಕಾರದಿ ಶಿವರಾತ್ರಿ ಮಹಾತ್ಮೆಯ
ಹೇಳಿದನಾತಗೆ ಶ್ರೀ ದತ್ತ ||
ದೇವಿಯ ಭಕ್ತನ ಕುಷ್ಠ ನಿವಾರಿಸಿ
ಜ್ಞಾನವಕೊಟ್ಟನು ಶ್ರೀ ದತ್ತ
ಕವಿಯಾದಾ ಕಲ್ಕೇಶನರ್ಚಕನ
ಶಿಷ್ಕನ ಮಾಡಿದ ಶ್ರೀ ದತ್ತ ||
ಹಸುಳೆಯರೆಲ್ಲರನು ಮೆಚ್ಚಿಸಿ ಧರಿಸಿದ
ಎಂಟು ರೂಪವನು ಶ್ರೀ ದತ್ತ |
ಕೃಷಿಕನ ಮೌನಾರ್ಚನೆಗೊಲಿದಿತ್ತನು
ನೂರ್ಮಡಿ ಧಾನ್ಯವ ಶ್ರೀ ದತ್ತ ||
ಪುರಜನರಿಂ ಸಹ ಸಕಲ ತೀರ್ಥಗಳ
ಯಾತ್ರೆಯ ಮಾಡಿದ ಶ್ರೀ ದತ್ತ |
ಪೂರ್ವಾಶ್ರಮದ ಭಗಿನಿಯ ಪಾಪ
ಕ್ಷಾಲನೆ ಮಾಡಿದ ಶ್ರೀ ದತ್ತ ||
ಹರುಷದಿ-ಹೇಳಿದ ಗುರುಗೀತೆಯನು
ನಾಮಧಾರಕಗೆ ಶ್ರೀ ದತ್ತ |
ನೆರೆ ನಂಬುವರನು ಪರಿಪಾಲಿಸುವುದು
ನಿಶ್ಚಿತವೆಂದನು ಶ್ರೀ ದತ್ತ ||
ಯಾಕೋ ರಜಕ ಎನ್ನುತ ಯವನರ
ರಾಜನ ಕರೆದನು ಶ್ರೀ ದತ್ತ |
ಕಾಕುಗೊಂಡಿಹ ರಾಜನ ಮಂಡಿಯ
ರೋಗವ ಕಳೆದನು ಶ್ರೀ ದತ್ತ ||
ಯವನರ ಕಾಟಕೆ ಕದಳೀವನಕೆ
ಹೋಗುವೆನೆಂದನು ಶ್ರೀ ದತ್ತ |
ಅವಸರದಿಂ ಬಲು ಶೋಕಿಸಬೇಡಿರಿ
ಇಲ್ಲಿಹೆನೆಂದನು ಶ್ರೀ ದತ್ತ ||
ಹಾಡಿರಿ ಹಾಡಿರಿ ಮತ್ತು ಆರತಿ ಮಾಡಿರಿ
ಎಂದನು ಶ್ರೀ ದತ್ತ |
ಬೇಡಿದ ಕೊಡುವೆನು ಭಾವುಕ ಜನರಿಗೆ
ಸತ್ಯವು ಎಂದನು ಶ್ರೀ ದತ್ತ ||
ಅತಿ ಸಂಕ್ಷೇಪದ ಈ ಗುರುಚರಿತ್ರೆಯ
ದಿನವೂ ಹಾಡುವ ಕೇಳ್ವರಿಗೆ |
ಅತಿ ಆನಂದವು ಮೇಣ್ ಸುಖಸಂಪದ
ಪಾಲಿಸುವನು ತಾ ಶ್ರೀ ದತ್ತ ||
ಮಂದಮತಿ ನಾ ತೊದಲ್ನುಡಿಯಿಂದ
ಹಾಡಿದೆನಿದನು ಶ್ರೀ ದತ್ತ |
ವಂದಿಸುತಲಿ ನಾ ಅರ್ಪಣ ಮಾಡುವೆ
ನಿನ್ನಡಿಗಳಿಗೆ ಶ್ರೀ ದತ್ತ ||
ಮಂಗಳ ಮಂಗಳ ನಿತ್ಕ ಸುಮಂಗಳ
ಮಂಗಳಮಯನು ಶ್ರೀ ದತ್ತ |
ಗಂಗೆಮಾಳಾಂಬಿಕೆ ಕಾಂತಸ್ವರೂಪನು
ಸಚ್ಚಿದಾನಂದಮಯ ಶ್ರೀ ದತ್ತ ||
ಸಿದ್ದಾಂತ ಅವಧೂತ ಚಿಂತ ಶ್ರೀ ಗುರುದೇವದತ್ತ
ಶ್ರೀ ಕೃಷ್ಣಾರ್ಪ್ಮಣಮಸ್ತು
0 ಕಾಮೆಂಟ್‌ಗಳು