|| ಕೇಶವಾದಿ ನಾರಾಯಣಗೆ ಆರುತಿ ||
ಆರುತಿ ಬೆಳಗಿರೆ ಕೇಶವಮೂರ್ತಿಗೆ
ಪಾರಾಯಣ ಮಾಡಿನಾರಾಯಣಗೆ
ಕೀರುತಿ ಪೊಗಳುತ ಮಾಧವಗೆ
ಆನಂದದಿ ಮಾಡೆಗೋವಿಂದಗೆ||ಆರುತಿ||
ಕಷ್ಟಗಳ ಕಳೆಯೆಂದು ವಿಷ್ಣುವಿಗೆ
ಮೋದದಿಂದಮಧುಸೂದನಗೆ
ಚಕ್ರಧರನು ತ್ರಿವಿಕ್ರಮಗೆ
ಪಾವನ ಮೂರುತಿ ವಾಮನನಿಗೆ||ಆರುತಿ||
ಆದರದಲಿ ಮಾಡೆ ಶ್ರೀಧರಗೆ
ದೋಷ ಕಳೆವ ಹೃಷಿಕೇಶನಿಗೆ
ಹೃತ್ಪದ್ಮದಲ್ಲಿರುವಪದ್ಮನಾಭನಿಗೆ
ಆಮೋದದಿ ಮಾಡೆದಾಮೋದರಗೆ||ಆರುತಿ||
ಶಂಕರರಿಂದೊಂದಿತಸಂಕರುಷಣಗೆ
ಲೇಸುಮಾಡುವವಾಸುದೇವನಿಗೆ
ವಿದ್ಯಾ ಬುದ್ಧಿ ನೀಡೊ ಪ್ರದ್ಯುಮ್ನನಿಗೆ
ಧೇನುಪಾಲಕ ಅನಿರುದ್ಧನಿಗೆ||ಆರುತಿ|||
ಹರುಷದಿಂದಪುರುಷೋತ್ತಮಗೆ
ಪಾದಕೆ ಒಂದಿಸಿ ಅಧೋಕ್ಷಜಗೆ
ಪಾರುಗಾಣಿಪ ನಾರಸಿಂಹಗೆ
ಚ್ಯುತಿಯಿಲ್ಲದೆನಮ್ಮಅಚ್ಯುತಗೆ||ಆರುತಿ||
ಧನದಾಸೆಯಿಲ್ಲದೆಜನಾರ್ಧನಗೆ
ಸಂಪ್ರೀತಿಯಿಂದಉಪೇಂದ್ರನಿಗೆ
ಲೀಲೆಯಿಂದಲಿ ಶ್ರೀಹರಿಗೆ
ಉದ್ಧರಿಪ ಕೃಷ್ಣಮಧ್ವೇಶಕೃಷ್ಣಗೆ||ಆರುತಿ||
0 ಕಾಮೆಂಟ್‌ಗಳು