ಕೃಷ್ಣ ಬಾರೋ - Krishna Baaro

||ಪುರಂದರ ದಾಸರ ದೇವರನಾಮ||




ಕೃಷ್ಣ ಬಾರೋ ಬಾರೋ ಶ್ರೀ ಕೃಷ್ಣ ಬಾರೋ

ಕೃಷ್ಣಯ್ಯ ನೀ ಬಾರಯ್ಯಾ||ಪ||

ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆ ನಾದಗಳಿಂದ

ಕೃಷ್ಣಾ ನೀ ಬಾರಯ್ಯ||ಅ.ಪ||


ಮನ್ಮಥ ಜನಕನೆ ಬೇಗನೆ ಬಾರೋ

ಕಮಲಾಪತಿ ನೀ ಬಾರೋ

ಅಮಿತಪರಾಕ್ರಮ ಶಂಕರ ಬಾರೋ

ಕಮನೀಯಗಾತ್ರನೆ ಬಾರಯ್ಯ ಹರಿಯೇ||೧||


ಸುರುಳು ಕೇಶಗಳ ಹೊಳೆವ ಅಂದ

ಭರದ ಕಸ್ತೂರಿ ತಿಲಕದ ಚೆಂದ

ಶಿರದಿ ಒಪ್ಪುವ ನವಿಲು ಕಂಗಳಿಂದ

ಥರಥರದಾಭರಣ ಧರಿಸಿ ನೀ ಬಾರೋ||೨||


ಹಾಲು ಬೆಣ್ಣೆಗಳ ಕೈಯಲ್ಲಿ ಕೊಡುವೆ

ಮೇಲಾಗಿ ಭಕ್ಷವ ಬಚ್ಚಿಟ್ಟು ತರುವೆ

ಜಾಲಮಾಡದೆ ಬಾರಯ್ಯ ನಿಶಾಹರಣ

ಬಾರೊ ಎನ್ನ ತಂದೆ ಪುರಂದರ ವಿಠಲ||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು