ಸುಂದರವದನೆ ರಂಗನ ಮಡದಿ - Sundara Vadane Rangana Madadi

|| ಲಕ್ಷ್ಮಿ ಹಾಡು ||




ಸುಂದರವದನೆ ರಂಗನ ಮಡದಿ

ಕುಂದದ ಭಾಗ್ಯವ ನೀಡುವೆ ತಾಯೆ|


ಕಂಡೆನೊ ಹರಿ ಸತಿಯ|

ಸುರು ಚಿರ ದುಂಡು ಕಂಕಣ ಕೈಯ್ಯಾ|| 

ಮಂಡೆಯೊಳ್ ಮಲ್ಲಿಗೆಯ|

ಹೆರಳಲಿ ದಂಡೆ ಮುಡಿದ ಪರಿಯ || 


ಪೈಠಣಿ ಉಟ್ಟಿಹಳು

ಗಳದಿ ಕಟ್ಟಾಣಿಯ ಕಟ್ಟಿಹಳು

ಹಾಟಕ ಹಾರಗಳು ನೋಳ್ಪರ ನೋಟಕೆ ಹಬ್ಬಗಳು ||1||


ಕಾಲಕಡಗ ರುಳಿಯು ಕಲಕಲ ಹೇಮ ಪೈಜಣ ಧ್ವನಿಯು

ಮೇಲೆ ಅಂಚಿನ ಸಿರಿಯು ಪುತ್ಥಳಿ

ಮಾಲೆ ತೂಗುವ ಕಟಿಯು ||2||


ಸರಸಿಜ ಸಮಮುಖಿಯ ನಾಶಿಕ್ಹರಳು ಮುತ್ತಿನ ಗೊನೆಯು|

ಹರಳು ಓಲೆಯ ಪ್ರಭೆಯು ಕರ್ಣದಿ

ಸ್ವರ್ಣಲೋಕದ ದ್ರಾಕ್ಷಾಲತೆಯು ||3||


ಸುಂದರ ಶುಭಗಾತ್ರೆ ಸುಖಮಯ ಇಂದು ಮುಖಿಯ ನೇತ್ರೆ

ಮುಂದೆ ಫಲದ ಪಾತ್ರೆ

ತಂದಿಟ್ಟಳು ಸರಸಿಜಳ ನೇತ್ರೇ ||4||


ನಂದಬಾಲನ ಮಡದಿ

ಸ್ವಪ್ನದಿ ಬಂದು ತೋರಿದೆ ಭರದಿ|

ಆನಂದವಾಯ್ತು ಮನದಿ|

ನಾಕಂಡೆನು ಇಂದಿರೇಶನ ದಯದಿ ||5||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು