|| ನಾರಾಯಣ ಸ್ತುತಿ ||
ರಾಗ - ಮೋಹನ
ತಾಳ - ಅಟ್ಟತಾಳ
ಚಿತ್ತಜನಯ್ಯನ ಚಿಂತಿಸು ಮನವೆ ll ಪ ll
ಹೊತ್ತು ಕಳೆಯದೆ ಪುರುಷೋತ್ತಮನ ನೆನೆ ಮನವೆllಅ.ಪll
ಕಾಲನ ದೂತರು ನೂಲು ಹಗ್ಗವ ತಂದು l
ಕಾಲು ಕೈಗಳ ಕಟ್ಟಿ ಮೇಲೆ ಕುಟ್ಟೀ l
ಕಾಲಪಾಶದಿಸುತ್ತಿ ಶೂಲದಿಂದಿರಿವಾಗ l
ಪಾಲಿಸುವರು ಉಂಟೆ ಜಾಲವ ಮಾಡದೆll1ll
ದಂಡಧರನ ಭಟರು ಚಂಡ ಕೋಪದಿ ಬಂದು l
ಕೆಂಡದ ನದಿಯ ತಡಿಗೆ ಕೊಂಡೊಯ್ದು l
ಖಂಡಖಂಡವ ಕಿತ್ತು ಕೆಂಡದೊಳಿಡುವಾಗ l
ಹೆಂಡರು ಮಕ್ಕಳು ಬಂದು ಬಂಡಾಯ ಬಿಡಿಸೋರೆll2ll
ಅಂಗುಳಿಗೆ ದಬ್ಬಣಂಗಳ ಚುಚ್ಚಿ ಎರಡು l
ಕಂಗಳಿಗೆ ಸೀಸವ ಕಾಸಿ ಹೊಯ್ಯಲು l
ತಂಗಿ ಅಕ್ಕ ಬಂದು ಭಂಗವ ಬಿಡಿಸೋರೆ l
ಅಂಗವು ಸ್ಥಿರವಲ್ಲ ರಂಗವಿಟ್ಠಲ ಬಲ್ಲ ll3ll
0 ಕಾಮೆಂಟ್‌ಗಳು