|| ದೇವರ ನಾಮ ||
ಏನು ಬರೆದೆಯೊ ಬ್ರಹ್ಮ ನೀನೆಷ್ಟು ನಿರ್ದಯನೋ
ಅಭಿಮಾನವನು ತೊರೆದು ಪರರನ್ನು ಬೇಡುವುದ||ಪ||
ಗೇಣೊಡಲು ಪೊರೆವುದಕೆ ಪೋಗಿ ಪರರನು
ಪಂಚಬಾಣಸಮ ರೂಪ ನೀನೆಂದು ಪೊಗಳೆ
ಆಣೆ ನಿನ್ನಾಣಿಲ್ಲ ನಾಳೆ ಬಾರೆಂದೆನಲು
ಗಾಣ ತಿರುಗುವ ಎತ್ತಿನಂತೆ ಬಳಲುವುದ
ಬಲ್ಲಿದರ ಮನೆಯ ಬಾಗಿಲ ಕಾಯ್ದು ಬೇಸತ್ತು
ಸೊಲ್ಲು ಸೊಲ್ಲಿಗೆ ಅವರ ಕೊಂಡಾಡುತ
ಇಲ್ಲ ಈ ವೇಳೆಯಲಿ ತಿರುಗಿ ಬಾರಂದೆನಲು
ಅಲ್ಲವನು ತಿಂದ ಇಲಿಯಂತ ಕೊರಗುವುದ
ಹಿಂದೆ ಬರೆದ ಬರಹ ಹೇಗಾದರಾಗಲಿ
ಮುಂದೆನ್ನ ವಂಶದಲಿ ಜನಿಸುವರ ಕಾಯೊ
ಸಂದೇಹಿಸಲಿಬೇಡ ಪುರಂದರವಿಟ್ಠಲ
ಕಂದರ್ಪ ಜನಕ ಉಡುಪಿಯ ಕೃಷ್ಣನಾಣೆ
0 ಕಾಮೆಂಟ್ಗಳು