|| ದಶಾವತಾರ ಮಂಗಳ ಸ್ತುತಿ ||
ಜಲದಲ್ಲಿ ಚಲಿಸುವ ಮತ್ಸ್ಯನಿಗೆ
ಗಿರಿಯ ಬೆನ್ನಲಿ ಪೋತ್ತ ಕೂರ್ಮನಿಗೆ
ಧರೆಯನ್ನುಧರಿಸಿದ ವರಹವಾತಾರಿಗೆ
ತರಳೆನ್ನ ಕಾಯ್ದ ಶ್ರೀ ನರಸಿಂಹಗೆ
ಮಂಗಳಂ ಜಯ ಮಂಗಳಂ 3
ಮಂಗಳಂ ಶುಭ ಮಂಗಳಂ
ಭೂಮಿಯ ದಾನವ ಬೇಡಿದರೆ
ಆ ಮಹಾ ಕ್ಷತ್ರಿಯರ ಗೆಲಿದವಗೆ
ರಾಮಚಂದ್ರನೆಂಬ ದಶರಥ ಸುತನಿಗೆ
ಸತ್ಯಭಾಮೆಯರಸ ಗೋಪಾಲಕೃಷ್ಣಗೆ
ಮಂಗಳಂ ಜಯ ಮಂಗಳಂ 3
ಮಂಗಳಂ ಶುಭ ಮಂಗಳಂ
ಬತ್ತಲೆ ನಿಂತಿಹ ಬೌದ್ಧನಿಗೆ
ಉತ್ತಮ ಹಯವ ನೇರಿದ ಕಲಿಗೆ
ಹತ್ತವತಾರದಿ ಭಕ್ತರ ಸಲಹುವ
ಕರ್ತೃಷ್ಠಿ ಪುರಂದರ ವಿಠಲನಿಗೆ
ಮಂಗಳಂ ಜಯ ಮಂಗಳಂ 3
ಮಂಗಳಂ ಶುಭ ಮಂಗಳಂ
0 ಕಾಮೆಂಟ್‌ಗಳು