|| ಲಕ್ಷ್ಮಿ ಹಾಡು ||
ಮತ್ಸ್ಯಾವತಾರ ನೀನಾದರೆ -
ಆಕೆ ಮತ್ಸ್ಯಗಂಗಳೆ ತಾನಾದಳೊ||
ಹೆಚ್ಚಿನ ಶಂಖವ ಹಿಡಿದರೆ - ಆಕೆ
ನಿಚ್ಚ ಶಂಖದ ಕಂಠಳಾದಳಯ್ಯ||೧||
ನೀಲವರ್ಣ ನೀನಾದರೆ - ಆಕೆ
ನೀಲಕುಂತಳೆ ತಾನಾದಳೊ||
ಲೋಲಕಮಲನಾಭನಾದರೆ - ಆಕೆ
ಬಾಲ ಕಮಲಮುಖಿಯಾದಳಯ್ಯ||೨||
ಬೆಟ್ಟವ ನೀನೊಂದು ಪೊತ್ತರೆ -ಕುಚದ
ಬೆಟ್ಟಗಳೆರಡುನು ತಾ ಪೊತ್ತಳೊ||
ದಿಟ್ಟ ಶೇಷನ ನೀ ತುಳಿದರೆ - ಆಕೆ
ಕಟ್ಟಿ ಬಾಸೆಗೆ ಶೇಷನ ನಿಲಿಸಿಹಳಯ್ಯ||೩||
ಗಜರಾಜ ವರದ ನೀನಾದರೆ - ಆಕೆ
ಗಜಗಮನೆಯು ತಾನಾದಳಯ್ಯ||
ನಿಜವಾದ ಸಿಂಹ ನೀನಾದರೆ - ಆಕೆ
ಭಜಿಸಿಸಿಂಹಮಧ್ಯೆಯಾಗಿಪ್ಪಳಯ್ಯ||೪||
ಈ ಪರಿಯಲಿ ಬಹು ಜನಿಸಿದೆ - ಭಲೆ
ಭಾಪುರೆ ಬಾಡದೊಳ್ ನೆಲೆಸಿದೆ||
ಗೋಪಿಯರ ಮೋಹ ಸಲಿಸಿದೆ -ಚೆಲುವ
ಶ್ರೀಪತಿ ಆದಿಕೇಶವರಾಯ ಮೆರೆದೆ||೫||
0 ಕಾಮೆಂಟ್ಗಳು