|| ಶಾರದಾ ಭಜನೆ ||
ಪಾಲಿಸೆಮ್ಮ ಮುದ್ದು ಶಾರದೆ
ಎನ್ನ ನಾಲಿಗೆಯಲಿ ತಪ್ಪು ಬಾರದೆ
ಲೋಲ ಲೋಚನೆ ತಾಯೆ
ನಿರುತ ನಂಬಿದೆ ನಿನ್ನ ||
ಅಕ್ಷರಕ್ಷರ ವಿವೇಕವಾ ನಿಮ್ಮ ಕುಕ್ಷಿಯೊಳೀರೇಳು
ಲೋಕವ ಸಾಕ್ಷಾತ್ ರೂಪದಿಂದ
ಒಲಿದು ರಕ್ಷಿಸು ತಾಯೆ ||
ಶೃಂಗಾರಪುರ ನೆಲೆವಾಸಿನೀದೇವಿ|
ಸಂಗೀತಗಾನ ವಿಲಾಸಿನಿ ಮಂಗಳಗಾತ್ರೆ
ತಾಯೆ ಭಳಿರೆ ಬ್ರಹ್ಮನರಾಣಿ||
ಸರ್ವಾಲಂಕಾರ ದಯಾ ಮೂರತಿ
ನಿಮ್ಮ ಚರಣವ ಸ್ಮರಿಸುವೆ ಕೀರುತಿ
ಗುರುಮೂರ್ತಿ ಪುರಂದರ ವಿಠಲನ್ನ ಸ್ಮರಿಸುವೆ ||
0 ಕಾಮೆಂಟ್ಗಳು