ನಿನ್ನ ಮಗನೇನೇ ಗೋಪಿ - Ninna Maganene Gopi

|| ದೇವರ ನಾಮ ||

ರಚನೆ : ಪುರಂದರ ದಾಸರು



ನಿನ್ನ ಮಗನೇನೇ ಗೋಪಿ-ಗೋಪಮ್ಮ 

ಉಡುಪಿಯ_ಶ್ರೀಕೃಷ್ಣ

ನಿನ್ನ ಮಗನೇನೆ ಗೋಪಿ

ಚೆನ್ನಾರ ಚೆಲುವ ಉಡುಪಿಯ ಶ್ರೀಕೃಷ್ಣಬಾಲ |

ನಿನ್ನ ಮಗನೇನೆ ಗೋಪಿ|| 


ಕಟವಾಯ ಬೆಣ್ಣೆ ಕಾಡಿಗೆಗಣ್ಣು ಕಟಿಸೂತ್ರ |

ಪಟವಾಳಿ ಕೈಪ ಕೊರಳೊಳು ಪದಕ ||

ಸಟೆಯಲ್ಲ ಬ್ರಹ್ಮಾಂಡ ಹೃದಯದೊಳಿರುತಿರಲು |

ಮಿಟಿಮಿಟಿ ನೋಡುವ ಈಮುದ್ದು ಕೃಷ್ಣ ..

ನಿನ್ನ ಮಗನೇನೆ ಗೋಪಿ||೧||


ಮುಂಗುರುಳ ಮುಂಜೆಡೆ ಬಂಗಾರದರಳೆಲೆ |

ರಂಗಮಾಣಿಕದ ಉಂಗುರವಿಟ್ಟು ||

ಪೊಂಗೆಜ್ಜೆ ಕಾಲಲಂದುಗೆ ಘಿಲ್ಲುಘಿಲ್ಲೆನುತ |

ಅಂಗಳದೊಳಗಾಡುತಿಹ ಈ ಮುದ್ದು ಕೃಷ್ಣ ...

ನಿನ್ನಮಗನೇನೆ ಗೋಪಿ||೨||


ಹರಿವ ಹಾವನೆ ಕಂಡು ಹೆಡೆಹಿಡಿದು ಆಡುವ

ಕರುವಾಗಿ ಆಕಳ ಮೊಲೆಯುಣ್ಣುವ ||

ಅರಿಯದಾಟವ ಬಲ್ಲ ಅಂತರಂಗದ ಸ್ವಾಮಿ

ಧರೆಯೊಳಧಿಕನಾದ ಪುರಂದರವಿಠಲಯ್ಯ...

ನಿನ್ನ ಮಗನೇನೆ ಗೋಪಿ||೩||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು