ಬ್ರಹ್ಮಾನಂದದ ಸಭೆಯೊಳಗಲ್ಲಿ - Brahmanandada Sabheyolagalli

|| ಹರಿ ಸ್ತುತಿ ||

ರಾಗ : ನಾದನಾಮಕ್ರಿಯಾ

ಏಕ ತಾಳ



ಬ್ರಹ್ಮಾನಂದದ ಸಭೆಯೊಳಗಲ್ಲಿ ಸುಮ್ಮನೆ

ಇರುತಿಹುದೇನಯ್ಯ ||ಪ||


ಮೂಡದು ಕೂಡದು ಉಣ್ಣದು ಮಾಣದು

ಕಾಡದು ಬೇಡದು ಕಂಗೆಡದು ನಾಡ ಮಾತುಗಳ

ಬಲ್ಲುದು ಆದದು ರೂಢಿಯೊಳಿರುತಿಹುದೇನಯ್ಯ ||


ಪೊಡವಿಗಧಿಕವೆಂಬುವರಿಗೆ ಬಲ್ಲುದು

ಕಡೆಮೊದಲಿಲ್ಲದ ಒಡಲಿಹುದು

ಬೆಡಗನರಿವೆನೆಂಬವರಿಗಗೋಚರ

ಪೊಡವಿಯೊಳಗಣ ಭಕ್ತರ ಬಲ್ಲುದು ||


ನಿಲ್ಲದು ನಿಲುಕದು ಎಲ್ಲಿಗೆ ಪೋಗದು

ಬಲ್ಲೆನೆಂಬವರಿಗಳವಡದು ಬಲ್ಲಿದ ನಮ್ಮ

ಪುರಂದರವಿಟ್ಠಲ- ಗಲ್ಲದೆ ತಿಳಿಯದು ಜಗದೊಳಗೆ ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು