|| ಹನುಮ ಸ್ತುತಿ ||
ಬಾಲ ಹನುಮ ಬರಲಿಲ್ಲವಮ್ಮ
ಚಿಕ್ಕ ಬಾಲ ಹನುಮಗೆ ಏನಾಯಿತಮ್ಮ ॥
ಶಂಕೆಯಿಲ್ಲದೆ ಲಂಕೆಗೆ ಹಾರಿ
ಢಂಕಿಸಿ ಕೈಕಾಲು ನೊಂದಿದ್ದಾವೇನ
ಆಕಾಶದ ಗಾಳಿ ಸಾಕು ಸೋಕಕೀತೆಂದು
ನಡೆಯಲಾರನೆಂದು ಕುಳಿತಿದ್ದಾನೇನ ॥|೧||
ಹಸಿದು ಬಂದ ಮುದ್ರಿಕೆ ತಂದ
ಹಸುಮಕ್ಕಳೂಟಕ್ಕೆ ಬರಲಿಲ್ಲವಮ್ಮ
ಅಸುರರ ವನಕ್ಣೋಗಿ ಹಣ್ಣು ಮೆಲ್ಲೆಂದರೆ
ಅಸುರರ ಕಂಡು ತಾ ಅಂಜಿದ್ದಾನೇನ ॥೨॥
ಆಕಾಶಮಾರ್ಗದಿ ರಾಮರ ನುಡಿ ಕೇಳಿ
ಭರದಿಂದಲಿ ಲಂಕಾಪುರನೇರಿದ
ಶ್ರೀರಾಮ ರಾವಣನ ಕೊಂದ ವಿಭೀಷಣ ಗೆದ್ದ
ಪುರಂದರ ವಿಠ್ಠಲ ತಾ ಮೆಚ್ಚಿದ್ದಾನೇನ |೩|

0 ಕಾಮೆಂಟ್‌ಗಳು