ನಾರಾಯಣ ಮಂತ್ರವ ಜಪಿಸೋಣ - Narayana Mantrava Japisona

|| ನಾರಾಯಣ ಸ್ತುತಿ ||




ನಾರಾಯಣ ಮಂತ್ರವ ಜಪಿಸೋಣ 

ನಾವೆಲ್ಲ ಈಗ 

ನಾರಾಯಣ ಮಂತ್ರವ ಜಪಿಸೋಣ 


ಧರೆಯೊಳು ನಾರದ ಬಿತ್ತಿದ ಮಂತ್ರ 

ಚಿರ ಧೃವ ರಾಯಗೆ ಕಲಿಸಿದ ಮಂತ್ರ

ವರ ಪ್ರಹ್ಲಾದಗೆ ಒಲಿದಾ ಮಂತ್ರ

ಕರಿರಾಜನು ತಾ ಮರಿಸಿದ ಮಂತ್ರ

ನಾರಾಯಣ ಮಂತ್ರವ ಜಪಿಸೋಣ ||೧||


ಶಂಖ ಚಕ್ರ ಪೀತಾಂಬರ ಧಾರಿ

ಕಂಕಣಲಂಕೃತ ಕೃಷ್ಣ ಮುರಾರಿ

ಪಂಕಜಲೋಚನ ಲಕ್ಷ್ಮೀ ರಮಣ

ನಾರಾಯಣ ಮಂತ್ರವ ಜಪಿಸೋಣ ||೨||


ಮುರಹರ ನಗಧರ ಕರುಣಾ ಸಾಗರ

ನಾರದ ಮುನಿವರ ಸ್ತೋತ್ರ ಪ್ರಿಯ

ವಾಸುಕಿ ಶಯನ  ಪಾವನ ಚರಣ

ಕೇಶವ ಕೃಷ್ಣ ಅವನೇ ಜನಾರ್ಧನ 

ನಾರಾಯಣ ಮಂತ್ರವ ಜಪಿಸೋಣ||೩||


ದುರುಳ ಅಜಾಮಿಳನ ಅಂತ್ಯ ಕಾಲದಲಿ

ನಾರಾಯಣನೆಂದು ನುಡಿಯಲು ಬಾಯಲಿ

ಘೋರ ದುರಿತಗಳೆಲ್ಲವ ನೀಗುತ 

ಭರದಲಿ ಅವನೇ ಸ್ವರ್ಗವನಿತ್ತ 

ನಾರಾಯಣ ಮಂತ್ರವ ಜಪಿಸೋಣ||೪||


ಶ್ರೇಷ್ಠವಾದ ಅಷ್ಟಾಕ್ಷರಿ ಮಂತ್ರ

ನಿಷ್ಠೆಯಿಂದಲಿ ಜಪಿಸುವ ಅವರ

ಇಷ್ಟಾರ್ಥಗಳನು ಮುದದಲಿ ನೀಡುತ

ಸೃಷ್ಟಿಗೊಡೆಯ ಶ್ರೀ ಶ್ರೀನಿವಾಸನುತ 

ನಾರಾಯಣ ಮಂತ್ರವ ಜಪಿಸೋಣ||೫||








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು