ರಾಮಚಂದ್ರ ಬಂದಾ - Ramachandra Bandaa

 || ಶ್ರೀರಾಮ ಭಜನೆ ||




ರಾಮಚಂದ್ರ ಬಂದಾ| 

ಸಕಲರ ಆತ್ಮರಾಮ ಬಂದಾ॥ 

ಕೌಸಲ್ಯೆಕಂದಾ ಆನಂದದಿಂದಾ। 

ಅಯೋಧ್ಯಾಪುರಕೀಗಾ.....॥ ಪ ॥


ರತ್ನಕಿರೀಟ ಕುಂಡಲ ಧರಿಸಿ | 

ಸಿಂಧೂರ ತಿಲಕ, ಪಿತಾಂಬರ ಧಾರೀ। 

ಬಂದ ಸೂರ್ಯವಂಶೀ..... ॥2॥ 


ಸೀತಾ ಮಾತಾ ಲಕ್ಷ್ಮಣ ಸಹಿತ| 

ಜೊತೆಯಲ್ಲಿ ಪರಮ ಭಕ್ತ ಹನುಮಂತ। 

ಬಂದ ಶ್ರೀಪುರುಷೋತ್ತಮ ॥3॥ 


ಶ್ರೀರಾಮಚಂದ್ರ ಪರಮ ಉದಾರಿ| 

ಭಕ್ತ ಜನ ಭವಭಯ ನಿವಾರಿ | 

ರಾವಣ ಸಂಹಾರಿ ॥4॥ 


ಶ್ರೀ ರಾಮರಾಯ ಕೈವಲ್ಯ ದಾತ| 

ಭಾವಿಕ ಜನ ಹ್ರನ್ಮಂದಿರ ವಾಸ | 

ಜ್ಞಾನ ಮೋಕ್ಷ ದಾತಾ ॥5॥


ಶ್ರೀರಾಮಚಂದ್ರ ಕೋದಂಡ ದಾರಿ| 

ಸದ್ಗುಣ ಸುಂದರ ಶಾಂತ ಸ್ವರೂಪಿ | 

ಸತ್ಯಧರ್ಮ ಮೂರ್ತಿ ॥6॥ 


ದೇಶದೇಶದಿ ಹಬ್ಬಿತು ಕೀರ್ತಿ 

ಮನೆಮನೆಯಲ್ಲೂ ಬೆಳಗಿತು ಜ್ಯೋತಿ| 

ದೊರಕಿತು ಸುಖ ಶಾಂತಿ ॥7॥ 


ಶರಣು ಬಂದೆವು ಶ್ರೀ ರಘುರಾಮ। 

ಭಕ್ತವತ್ಸಲ ತೋರೋ ಕರುಣ। 

ನೀಡು ನಿನ್ನ ನಾಮ ॥8॥ 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು