|| ಹನುಮಂತ ಸ್ತುತಿ ||
ಆಚಾರ ಪೂತ ಓ ಬ್ರಹ್ಮಚಾರಿ
ನೀನಯ್ಯ ನನಗೆ ನಿಜವಾದ ದಾರಿ ||ಪಲ್ಲವಿ||
ಓ ವಾಯುಪುತ್ರ ಓ ಸೂರ್ಯ ಶಿಷ್ಯಾ
ಓ ಅಂಜನಾಮಾತೆ ಪೂಜಾ ಫಲ ನೇ
ನಿನ್ನೆದುರು ನಾನೇನು ನನ್ನ ಧರ್ಮವು ಏನು
ಕ್ಷಮಿಸಿ ನನ್ನಯ ನಡತೆ ಕರುಣಿಸೋ ದೇವ ...||೧||
ಅಂದು ನೀ ಮುನಿಜನರ ಬಳಿಯಲ್ಲಿ
ಆಚಾರ ಪಾಠವೆಲ್ಲವ ಕಲಿತೆ ಹನುಮತ್ರಭೂ
ಇಂದು ನೀ ನನಗಾಗಿ ಅವುಗಳಲ್ಲವ ಸ್ಮರಿಸಿ
ನನ ಹಿಂದೆ ಬಂದು ನೀ ಕಾಪಾಡಿದೆ ..||೨||
ಮತಿಯಲ್ಲಿ ನಿನ ಬಿಡದೆ ಬೇರೇನೂ ನೆನೆಯದೇ
ಸರ್ವದಾ ಇರುವುದೇ ನಿಜವಾದ ಮಡಿಯು
ಬ್ರಹ್ಮಚರ್ಯವೆ ಪರಮ ಆಚಾರವಾಗಿಹುದು
ಆ ಸಚ್ಚಿದಾನಂದವನು ನೀಡಯ್ಯಾ..||೩||
0 ಕಾಮೆಂಟ್‌ಗಳು