ಸದಾ ನಿನ್ನ ಚರಣಕೆರಗಿ ಭಜಿಸುತಿರುವೆ ಗಣಪನೆ - Sada Ninna Charanakeragi Bhajisutiruve Ganpane

|| ಗಣಪತಿ ಸ್ತುತಿ ||




ಸದಾ ನಿನ್ನ ಚರಣಕೆರಗಿ ಭಜಿಸುತಿರುವೆ ಗಣಪನೆ 

ಅಭಯ ನೀಡಿ ಮುದವ ನೀಡಿ 

ಎನ್ನ ಪೊರೆಯೊ ಗಣಪನೆ ||ಪ||


ವಿಫ್ನುಗಳನು ದೂರ ಮಾಡಿ 

ಶರಣರನ್ನು ಪೊರೆವನೇ 

ನಿನ್ನ ನಾಮ ಸುಧೆಯ ತಂಪು 

ಎನ್ನ ಮನಕೆ ನೀಡೊ ನೀ ॥೧॥ 


ಎನ್ನ ಭವದ ಕಹಿಯನೆಲ್ಲ 

ದೂರ ಮಾಡೋ ದೇವನೇ 

ಹಗಲು ಇರುಳು ನಿನ್ನನೆನೆವ 

ಮನವ ನೀಡೊ ದೇವನೇ ||೨||


ಕಷ್ಟಗಳನು ದೂರ ಮಾಡಿ 

ಶಿಷ್ಟರನ್ನು ಪೊರೆವನೇ 

ಎನ್ನ ತಂದೆ ತಾಯಿಯಾಗಿ 

ಭುವಿಗೆ ಬಾರೋ ಗಣಪನೆ ॥೩॥ 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು