|| ಶಿವ ಸ್ತುತಿ ||
ರಚನೆ : ಪ್ರಾಣೇಶ ವಿಠಲದಾಸರು
ಶರಣು ನಿನ್ನ ಚರಣ ಕಮಲಗಳಿಗೆ ಶಿವಶಿವಾ |
ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವಶಿವಾ॥ಪ॥
ದಂತಿ ಚರ್ಮ ಹೊದ್ದ ಭಸ್ಮಭೂಷ ಶಿವಶಿವಾ |
ಚಿಂತಿ ರಹಿತ ಲಯಕೆ ಕರ್ತನಾದ ಶಿವಶಿವಾ |
ಸಂತರಿಂದ ಸತತ ಸೇವೆಗೊಂಬ ಶಿವಶಿವಾ |
ಕಂತುಪಿತನ ಪೂರ್ಣ ಪ್ರೀತಿಪಾತ್ರ ಶಿವಶಿವಾ||೧||
ಮಂದಮತಿಯ ತಪ್ಪನೆಣಿಸಬ್ಯಾಡ ಶಿವಶಿವಾ |
ಕುಂದು ನಿನಗೆ ಎಂದಿಗೆಂದಿಗಿಲ್ಲ ಶಿವಶಿವಾ |
ಮಂದಗಮನೆ ನಿನ್ನ ಮನದೊಳಿಲ್ಲೆ ಶಿವಶಿವಾ |
ತಂದುಕೊಂಡ ದಕ್ಷ ವೃಥ ಕುವಾರ್ತಿ ಶಿವಶಿವಾ ॥೨॥
ಹೀನರಂತೆ ನಿನಗೆ ಕೋಪ ಸಲ್ಲ ಶಿವಶಿವಾ |
ಮಾಣು ಯಜ್ಞ ಸಹಯನಾಗು ದಯದಿ ಶಿವಶಿವಾ ||
ಏನುಪಾಯ ಇದಕೆ ಚಿಂತಿಸುವುದು ಶಿವಶಿವಾ [
ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವಶಿವಾ॥೩॥
0 ಕಾಮೆಂಟ್‌ಗಳು