|| ಶ್ರೀರಾಮ ಸ್ತುತಿ ||
ರಾಗ :ಶಿವರಂಜಿನಿ
ತಾಳ:ಭಜನ್ ಠೇಕ
ಶರಣು ಶರಣು ಶ್ರೀ ರಾಮಾ |
ಭಜಿಸುವೆನು ನಿನ್ನ ನಾಮ |
ವಂದಿಸುವೆ ನಿನ್ನ ಚರಣ |
ನಿನ್ನೊಳಗೆ ನಿಲಿಸು ಮನವಾ॥ಪ॥
ಹನುಮನಿಗೆ ನೀನೆ ಪ್ರಾಣಾ |
ಮಾತೆ ಜಾನಕಿ ರಮಣಾ |
ಜಗವೆಲ್ಲ ನಿನದೆ ತಾಣಾ|
ಭಕ್ತರಿಗೆ ನಿನೆ ತ್ರಾಣಾ ॥1॥
ಕೌಸಲ್ಯೆ ಮಾತೆ ತನಯ |
ನೀಡೆನಗೆ ಭಕ್ತಿ ಪ್ರೇಮ |
ನಂಬಿರುವೆ ನಿನ್ನ ಚರಣಾ |
ಕರಪಿಡಿದು ಸಲಹೊ ಎನ್ನಾ ||2||
ರಘುವರನೆ ತೋರು ಕರುಣಾ |
ಕಳೆಯನ್ನ ಮೋಹ ಮಾಯ
ಬಿಡಿಸೆನ್ನ ಜನ್ಮ ಮರಣಾ|
ನೀಡೆನಗೆ ನಿನ್ನ ಧಾಮಾ ।3॥
0 ಕಾಮೆಂಟ್‌ಗಳು