|| ಗಣಪತಿ ಸ್ತುತಿ ||
ವಂದೇ ಓಂಕಾರ ಚಾಮರ ಕರ್ಣನೇ
ಶಂಕರ ಸುತ ಶರಣು
ವಿನಾಯಕ ಮಂಗಳ ವದ ಶರಣು ||ಪ||
ಮದ್ದೂರು ಗಣಪತಿ ಶರವು ಗಣಪತಿ
ಕುಂಭಾಶಿ ಗಣಪತಿ ಶರಣು
ಹಟ್ಟಿಯಂಗಡಿ ಗಣಪತಿ ಇಡಗುಂಜಿ ಗಣಪತಿ
ಗೋಕರ್ಣ ಗಣಪತಿ ಶರಣು||ಅ.ಪ||
ಸುಮುಖನೇ ಕಪಿಲನೇ ಏಕದಂತನೇ
ಶುಭವರ್ಣ ಗೌರಿ ಸುತನೇ ||
ನೀನಲ್ಲದೆನಗಾರು ಸಖರಿಲ್ಲವೋ
ಬಾಂಧವರಿಲ್ಲವೋ ಕಾಯುವವರಿಲ್ಲವೋ ||1||
ವಿಕಟನೇ ವಿಮಲನೇ ಧೂಮ್ರವರ್ಣನೇ
ಗಣನಾಥ ನಿನಗೆ ವಂದನೆ
ನಿನ್ನನೇ ಎಂದೆಂದು ಸ್ತುತಿ ಮಾಡುವೆ
ಹಾಡಿ ಕೊಂಡಾಡುವೆ ಪೂಜೆ ವ್ರತ ಮಾಡುವೆ ||2| |
0 ಕಾಮೆಂಟ್‌ಗಳು