ಕಂಡೆ ಕರುಣಾನಿಧಿಯ ಗಂಗೆಯ - Kande Karunanidhiya Gangeya

|| ಶಿವ ಸ್ತುತಿ ||




ಕಂಡೆ ಕರುಣಾನಿಧಿಯ ಗಂಗೆಯ 

ಮಂಡೆಯೊಳಿಟ್ಟ ದೊರೆಯ ಶಿವನ ||ಪ||


ರುಂಡಮಾಲೆ ಸಿರಿಯ ನೊಸಲೊಳು 

ಕೆಂಡಗಣ್ಣಿನ ಬಗೆಯ ಹರನ ||ಅ.ಪ||


ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ

ಮುಪ್ಪುರ ಗೆಲಿದವನ ಮುನಿನುತ ಸರ್ಪಭೂಷಣ ಶಿವನ ಹರನ ||೧||


ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನ

ಪಶುಪತಿಯೆನಿಸುವನ ವಸುಧೆಯೊಳು 

ಶಶಿಶೇಖರ ಶಿವನ ಹರನ ||೨||


ಗಜ ಚರ್ಮಾಂಬರನ ಗೌರೀವರ ತ್ರಿಜಗದೀಶ್ವರನ

ತ್ರಿಜಗನ್ಮೋಹನನ ತ್ರಿಲೋಚನ ತ್ರಿಪುರಾಂತಕ ಶಿವನ ಹರನ||೩||


ಕಾಮಿತ ಫಲವೀವನ ಭಕ್ತರ ಪ್ರೇಮದಿ ಸಲಹುವನ

ರಾಮನಾಮಸ್ಮರನ ರತಿಪತಿ ಕಾಮನ ಸಂಹರನ ಶಿವನ||೪||


ಧರೆಗೆ ದಕ್ಷಿಣಕಾಶಿ ಎನಿಸುವ ಪುರ ಪಂಪಾವಾಸಿ

ತಾರಕ ಉಪದೇಶಿ ಪುರಂದರವಿಠಲ ಭಕ್ತರ ಪೋಷಿ||೫||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು