ವಾರಿಜಲಯಪತೆ ವಾರಿಜನಾಭನೆ - Varijalayapathe Varijanabhane

|| ಶ್ರೀ ಹರಿ ಭಜನೆ ||



ವಾರಿಜಲಯಪತೆ ವಾರಿಜನಾಭನೆ 

ವಾರಿಜಭವಪಿತ ,ವಾರಿಜನೇತ್ರನೆ

ವಾರಿಜ ಮಿತ್ರ ಅಪಾರ ಪ್ರಭಾವನೆ

ವಾರಿಜ ಝಾಂಡದ ಕಾರಣ ದೊರೆಯೆ

ಬಾರಯ್ಯಾ ಬಾಬಾ ಭಕುತರಾಪ್ರಿಯಾ 

ಶ್ರೀನಿವಾಸ ರಾಯ


ವಾರಿಜಲಯಪತೆ ವಾರಿಜನಾಭನೆ 

ವಾರಿಜಭವಪಿತ ವಾರಿಜನೇತ್ರನೆ

ವಾರಿಜ ಮಿತ್ರ ಅಪಾರ ಪ್ರಭಾವನೆ

ವಾರಿಜ ಝಾಂಡದ ಕಾರಣ ದೊರೆಯೆ


ಬಾರಯ್ಯಾ ಬಾ ಬಾ ಬಾ ಬಾಬಾ

ಭಕುತರಪ್ರಿಯಾ ಶ್ರೀನಿವಾಸ ರಾಯ

ಮಾರಜನಕ ಮುಕುತಾರೊಡೆಯ 

ದೇವಯ್ಯಾ ಜೀಯ

                                      ||ಬಾರಯ್ಯಾ||


ಸ್ಯಂದನವೇರಿಬಪ್ಪ ರಂಗಾ ದೇವೋತುಂಗಾ

ನಂದಾನಂದನ ಅರಿಮದ ಭಂಗಾ ಕರುಣಾಪಾಂಗ

ಸಿಂಧುಶಯನ ಸುಂದರಾಂಗ ಹೇ ನಾರಸಿಂಗ

ಕಂದಾವಿರಿಂಚಿಯು ನಂದಿವಾಹನ ಅಮರೇಂದ್ರ ಸನಕ

ಸನಂದನಾದಿ ಮುನಿ ವ್ರಂದ ನಿಂದು ಬಂದು

ಧಿಂ ಧಿಂ ಧಿಮಿಕೆಂದು ನಿಂದಾಡಲು ಆನಂದದಿ ಮನಕೆ

                                      ||ಬಾರಯ್ಯಾ||


ಜಗಜನ್ಮಾದಿಕರ್ತ ಗೋವಿಂದಾ ಉದರದಿಲೋಕ

ಲಘುವಾಗಿ ಧರಿಸಿದ ಮುಕುಂದಾ

ಭಕ್ತರ ಮನಕೆ ಝಗಝಗಿಸುತ ಪೊಳೆವಾನಂದ

ನಿಗಮಾವಳಿಯಿಂದ


ಅಗಣಿತ ಮುನಿಗಳ ನಗ ಖಗ ಮ್ರಘ ಶಶಿ 

ಗಗನಾಮರಾಜ್ಯರು ಸೊಗಸಾಗಿ ಬಗೆಬಗೆ 

ಪೊಗಳುತಲಿ ಬೇಗ ಜಿಗಿಜಿಗಿದಾಡಲು 

ಮುಗುಳುನಗೆಯ ಮಹಾಉರಗಗಿರಿವಾಸ

                                   ||ಬಾರಯ್ಯಾ||


ತಡಮಾಡ ಬ್ಯಾಡವೊ ಹೇ ನಲ್ಲಾ 

ವಾಕು ಲಾಲಿಸೆನ್ನೊಡೆಯ ಗೋಪಾಲವಿಠ್ಠಲಾ 

ದೇವ ಪರಾಕು ಅಡಿ ಇಡು ಭಕ್ತ ವತ್ಸಲಾ

ಶ್ರೀ ಲಕುಮಿ ನಲ್ಲಾ

ಮಡುವಿನೊಳಗೆ ಗಜ ಮೊರೆಯಿಡಲಾ ಕ್ಷಣ

ಮಡದಿಗೆ ಹೇಳದೆ ದುಡದುಡನೆ ಬಂದು

ಹಿಡಿದು ನಕ್ರನ ಬಾಯ ಕಡಿದು ಬಿಡಿಸಿದನೆ

ಸಡಗರದಲಿ ರಮೆಪೊಡವಿಯೊಡಗೂಡಿ ಬೇಗ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು