ಈಶ ನಿನ್ನ ನಿರತ ಭಜಿಸಿ - Isha Ninna Nirata Bhajisi

|| ಶಿವ ಸ್ತುತಿ ||




ಈಶ ನಿನ್ನ ನಿರತ ಭಜಿಸಿ

ತೋಷದಿಂದ ಪೂಜೆ ಮಾಳ್ಫೆ   

ಕ್ಲೇಶ ನೀಗಿ ಸಲಹು ನನ್ನ ಮಹಾರುದ್ರನೇ |

ಆಸೆಯಿಂದ ಬೇಡಿಕೊಂಬೆ

ದೋಷವನ್ನು ದೂರ ಮಾಡು

ದಾಸನಾಗಿ ಸೇವೆಗೈವೆ ವಾಮದೇವನೇ||೧||


ಅರಿತೆನಯ್ಯ ನಿನ್ನ ಮಹಿಮೆ  

ಹರುಷದಿಂದ ನಿನ್ನ ನಾಮ

ನಿರತ ನೆನೆಯುವಂತೆ ಮಾಡು ವ್ಯೋಮಕೇಶನೇ|

ಶಿರದಿ ಶಶಿಯ ಮುಡಿದ ದೇವ

ಕರುಣ ಮೂರ್ತಿ ಹರಸುಯೆನ್ನ

ಶರಣುಯೆನುತ ಪಾದಹಿಡಿವೆ ಗೌರಿಯರಸನೆ||೨||  


ದಾರಿಗಾಣದಯ್ಯ ನನಗೆ

ದಾರಿ ತೋರಿಸಯ್ಯ ನೀನು

ಪಾರುಗಾಣಿಸಯ್ಯ ಯೆನ್ನ ಸೋಮಶೇಖರ|

ಯಾರ ಮೊರೆಯನಿಡೆನು ನಾನು

ಚಾರುಚರಣ ತೋರುಯೆನಗೆ

ಮೂರುಲೋಕ ಸ್ವಾಮಿ ದೇವ ಚಂದ್ರಶೇಖರ||೩||


ಸರಿಯ ಬುದ್ದಿ ಕಲಿಸು ನನಗೆ 

ಕರವ ಹಿಡಿದು ನಡೆಸುಯೆನ್ನ 

ಪರಮ ಕರುಣೆ ಬೀರುಯೆನಗೆ ಭುಜಗ ಭೂಷಣ|

ಮರೆತು ಬಿಡದೆ ಹರನ ನಾಮ 

ಬರೆದು ನಿರತ ಭಜಿಸುವವರ  

ನಿರತ ಪೊರೆವನೆಲ್ಲರನ್ನು ನಂದಿವಾಹನ||೪||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು