|| ಹನುಮ ಸ್ತುತಿ ||
ಪವನ ತನಯ ಹನುಮನನ್ನು
ಮನದಿಯಿಂದು ಸ್ತುತಿಸುವ|
ವಿವಿಧ ಹೂವುಗಳನು ಹಾಕಿ
ಭಕ್ತಿಯಿಂದ ಭಜಿಸುವ||
ರಾಮಭಕ್ತ ಕೇಸರಿಯನು ನೆನೆದು
ಮುದವ ಪಡೆಯುವ|
ಭೂಮಿಸುತೆಗೆ ಮುದ್ರೆಯಿತ್ತ
ಮಾರುತಿಯನು ನುತಿಸುವ||
ಲಂಕೆಯನ್ನು ಸುಟ್ಟ
ಆಂಜನೇಯನನ್ನು ನೆನೆಯುವ|
ಸಂಕಟವನು ನಾಶ ಮಾಡ್ವ
ವಾಯುಸುತನ ಜಪಿಸುವ||
ಶರಣ ಜನರ ನಿರತ ಪೊರೆವ
ಪವನಜನನು ನಮಿಸುವ|
ಕರವ ಮುಗಿದು ಮುಖ್ಯಪ್ರಾಣ
ಚರಣವನ್ನು ಹಿಡಿಯುವ||4||

0 ಕಾಮೆಂಟ್‌ಗಳು