ನರಸಿಂಹ ಮಂತ್ರವು ಒಂದಿರಲು ಸಾಕು - Narasimha Mantravu Ondiralu Saku

|| ನರಸಿಂಹ ಸ್ತುತಿ ||




ನರಸಿಂಹ ಮಂತ್ರವು ಒಂದಿರಲು ಸಾಕು | 

ದುರಿತ ಕೋಟಿಯ ತರಿದು ಭಾಗ್ಯವನ್ನು ಕೊಡುವ ॥ಪ||

ನರಸಿಂಹ ಲಕ್ಷ್ಮೀನರಸಿಂಹ ||



ಶಿಶುವಾದ ಪ್ರಹ್ಲಾದನ ಬಾಧೆ ಬಿಡಿಸಿದ ಮಂತ್ರ 

ಅಸುರಕುಲದವರಿಗೆ ಶತ್ರು ಮಂತ್ರ 

ವಸುಧೆಯೊಳು ಪಾತಕಿಗಳಘವ ಹೀರುವ ಮಂತ್ರ 

ಪಶುಪತಿಗೆ ಪ್ರಿಯವಾದ ದಿವ್ಯ ಮಂತ್ರ ||೧||


ದಿಟ್ಟ ಧ್ರುವರಾಯಗೆ ಪಟ್ಟಗಟ್ಟಿದ ಮಂತ್ರ 

ಶಿಷ್ಟ ವಿಭೀಷಣನ ಪೊರೆದ ಮಂತ್ರ 

ಕಡೆಯಲ್ಲಿ ಅಜಾಮಿಳನ ಸಲಹಿದ ಮಂತ್ರ 

ಮುಟ್ಟಿ ಭಜಿಸಿದವರಿಗೆ ಮೋಕ್ಷ ಮಂತ್ರ ||೨||


ಹಿಂಡುಭೂತನ ಕಡಿದು ತುಂಡು ಮಾಡುವ ಮಂತ್ರ 

ಕೊಂಡಾಡೋ ಲೋಕಕೆ ಪ್ರಪಂಚ ಮಂತ್ರ 

ಗಂಡುಗಲಿ ಕದನ ಉದ್ದಂಡ ವಿಕ್ರಮ ಮಂತ್ರ 

ಪುಂಡರೀಕಾಕ್ಷ ಪುರಂದರ ವಿಠಲ ಮಂತ್ರ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು