|| ಗಣಪತಿ ಸ್ತುತಿ ||
ವಾರಣಾಸ್ಯಾ ವಕ್ರತುಂಡಾ
ಶೂರ್ಪಕರ್ಣಾ ಪಾಲಯ
ಹೇರೆಂಬಾ ಚಾರುಹಾಸಾ
ಸರ್ಪ ಸೂತ್ರಾ ಪಾಲಯ ||ಪ||
ಪ್ರಮಥ ನಾಥಾ ಪ್ರಥಮ ವಂದ್ಯಾ
ಸ್ಕಂದ ಗುರುವರ ವರಮತೇ
ರಕ್ತ ವಸನಾ ಲಂಬ ಜಠರಾ
ಏಕದಂತಾ ಗಣಪತೇ ||೨||
ಕ್ಷಿಪ್ರವರದಾ ಅರ್ಕಲಸನಾ
ಪ್ರಶ್ನ ಗಣಪತಿ ನಾಮಕಾ
ಯೋಗ ಸುಗಮಾ ವಿಘ್ನ ಹರಣಾ
ಸರ್ವಲೋಕ ವಿನಾಯಕಾ ||೨||
ಆಖುವಾಹನ ಪತ್ರಪೂಜಿತ
ಸಿದ್ಧಿ ಬುದ್ಧಿ ಪ್ರದಾಯಕಾ
ಗಣಪತೇ ಸಚ್ಚಿದಾನಂದಾ
ಸುಮುಖ ವಿಕಟಾ ಪಾಲಯ ||೩||

0 ಕಾಮೆಂಟ್‌ಗಳು