|| ಚಂದ್ರಘಂಟಾ ದೇವಿ ಸ್ತುತಿ ||
ಚಂದ್ರಶೇಖರನೊಡತಿ ಚಂದ್ರಘಂಟಾ ದೇವಿ
ಚಂದ್ರ ಕಾಂತಿಯ ತನುವ ಚೆಲುವಿನೊಡತಿ
ಚಂದ್ರ ಘಂಟೆಯ ಶಿರದಿ ಧರಿಸಿರುವ ದಿವ್ಯಾಂಗಿ
ಚಂದ್ರಭಾಗ ದೇವಿ ಸೌಖ್ಯ ಭವತಿ ||ಪ||
ಅಭಯ ಮುದ್ರೆಯಲಿರುವ ಅಂಬಿಕೆಯ ಅಡಿಗೆರಗಿ
ಸಬಲರಾಗುವ ನಾವು ಎಲ್ಲ ಬನ್ನಿ
ಉಭಯ ಜ್ಞಾನವ ನೀಡಿ ಮುಕ್ತಿ ಕೊಡುವಳು ತಾಯಿ
ಅಭಿವಂದಿಸುವ ಎಲ್ಲ ಹೂವ ತನ್ನಿ ||೧||
ಸಿಂಹ ವಾಹಿನಿ ಧೀರೆ ಸಕಲ ಬಲ ಗಂಭೀರೆ
ಸಂಹರಿಸಿದಳು ಅಸುರ ಸಂತತಿಯನು
ಸಿಂಹರೂಪದ ಹರಿನೀಶ ಕೃಷ್ಣನ ಭಗಿನಿ
ಸಂಹರಿಸುವಳು ನಮ್ಮ ದುರಿತಗಳನು ||೨||

0 ಕಾಮೆಂಟ್ಗಳು