ಶರಣು ಬಂದೆವು ತಾಯೆ ಮರೆಯದೆ ನೀ ಕಾಯೆ - Sharanu Bandevu Thaye Mareyade NeeKaye

|| ದೇವಿ ಸ್ತುತಿ ||



ಶರಣು ಬಂದೆವು ತಾಯೆ ಮರೆಯದೆ ನೀ ಕಾಯೆ

ಚರಣ ಸೇವೆಯ ತಾರೆ ಚಾರುಲತೆಯೇ 

ಕರ ಮುಗಿವೆ ಕೌಮಾರಿ ಗೌರಿ ಕಾತ್ಯಾಯಿನಿಯೇ

ಕಾರುಣ್ಯ ವಾರದಿಯೇ ಕನಕಾಂಗಿಯೇ ||ಪ||


ಆಜ್ಞಾಚಕ್ರ ನಿಲಯೇ ಅಖಂಡ ಬ್ರಹ್ಮಾಂಡ ಪಾಲೆ

ಸುಜ್ಞಾನ ವರದೇ ಸುರ ಪೂಜಿತೆ

ವಿಜ್ಞಾನ ವಿಜಯಿನಿ ಅಪರಿಮಿತ ಲೀಲೆ

ಯಜ್ಞ ಕುಂಡಲ ಜನಿತೆ ಯೋಗಾಂಬಿಕೆ ||೧||


ಹರಿಹರ ಬ್ರಹ್ಮದಿ ವಂದಿತಳೆ ವನಜಾಕ್ಷಿ

ಭೈರವನ ಪ್ರಿಯ ಸಖಿಯೇ ರುಂಡಮಾಲೆ

ಪರಮ ಪರಿಪಾಲ ಫಾಲ ನೇತ್ರನ ಸಖ

ಹರಿನೀಶ ಕೃಷ್ಣನಿಗೆ ಸಾನುಕೂಲೆ ||೨||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು