|| ಶಾರದಾ ಸ್ತುತಿ ||
ನಲಿದಾಡೇ ಎನ್ನ ನಾಲಗೆ ಮ್ಯಾಲೆ | ಶಾರದಾದೇವಿ ||
ಕುಣಿದಾಡೆ ಎನ್ನ ನಾಲಗೆ ಮ್ಯಾಲೆ | ಸರಸ್ವತಿ ದೇವಿ||
ಘಿಲು ಘಿಲು ಘಿಲು ಗೆಜ್ಜೆಯ ನಾದ |
ಹೊಳೆವ ಅಂದುಗೆ ರುಳಿ ಪೈಂಜಣವಿಟ್ಟ ಪುಟ್ಟ ಪಾದ |
ಸುರವರನುತ ಪಾದ ಸರಸಿಜೋದ್ಭವನ ವದನ ನಿಲಯಳೆ|
ಕರುಣದಿಂದ ಪರಿಪಾಲಿಸು ಮಾತೆ ||೧||
ನಸುನಗೆ ಮುಖವು ನಾಸಾಭರಣ |
ಎಸೆವ ಕಪೋಲ ಹೊಸ ಮುತ್ತಿನ ಚಳ ತುಂಬಿಟ್ಟ ಶ್ರವಣ |
ತಿಲಕವು ಹಸನ ಶಶಿ ಸೂರ್ಯರ ಆಭರಣ ಶೋಭಿತಳೆ|
ಕುಸುಮ ಮುಡಿದ ಮೂರ್ಧ್ವಜವುಳ್ಳವಳೆ ||೨||
ಶೃಂಗಾರವಾದ ಜಡೆ ಬಂಗಾರ |
ರಾಗುಟಿ ಶೌರಿ ಹೊಂಗ್ಯಾದಿಗೆ ಗೊಂಡೆ
ಮುತ್ತಿನ ಹಾರ ರಂಗು ಮನೋಹರ |
ಮಂದಗಮನೆ ಅರವಿಂದ ನಯನ ಸಿರಿ |
ರಂಗ ವಿಟ್ಟಲನ ತೋರೇ ಶುಭಾಂಗಿ ||೩||

0 ಕಾಮೆಂಟ್ಗಳು