ಜಯತು ಜಯತು ಜನನಿ ಜಯ ಶೈಲ ಪುತ್ರಿ - Jayatu Jayatu Janani Jaya Shailaputri

|| ಶೈಲಪುತ್ರಿ ಸ್ತುತಿ ||




ಜಯತು ಜಯತು ಜನನಿ ಜಯ ಶೈಲ ಪುತ್ರಿ

ತಾಯ ಆರಾಧನೆಗೆ ಬಂತು ನವರಾತ್ರಿ


ನಿನ್ನ ಕಣ್ಣಿನ ಪ್ರಭೆಯು ಜಗವ ಬೆಳಗಿರಲು

ಎಲ್ಲ ಮನದ ತಮವು ನಿನಗಂಜುತಿರಲು

ಅನ್ನ ವಸನಗಳು ನಿನ್ನದೇ ದಾನವಾಗಿರಲು

ಚಿನ್ನದಾರತಿ ಬೆಳಗಿ ಶಿರವ ಬಾಗುವೆನು ||೧||


ವೃಷಭ ವಾಹಿನಿ ತಾಯೇ ಶೂಲಧಾರಿಣಿಯೇ

ವಿಷ ಜನರ ವಶದಿಂದ ನನ್ನನ್ನು ಕಾಯೇ

ದೋಷಗಳ ಕಳೆಯಲು ನೀಗಲು ಮಾಯೆ

ಔಷಧವು ನಿನ್ನಯ ನಾಮ ಘೋಷಗಳೆ ||೨||


ನಿನ್ನ ಹೊರತು ಅನ್ಯ ಮಡಿಲಿಲ್ಲ ಎನಗೆ

ಎನ್ನ ಸಲಹುವ ಹೊಣೆಯ ಭಾರವಿದೆ ನಿನಗೆ

ಪನ್ನಗ ಶಯನ ಹರಿನೀಶ ಕೃಷ್ಣ ಸೋದರಿ

ನಿನ್ನ ಮಹಿಮೆಯ ಬೇಡೋ ದಯ ತಾರೆ ಎನಗೆ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು