|| ಹರಿನಾಮ ಕೀರ್ತನೆ ||
ರಾಗ :- ಹಿಂದೋಳ ತಾಳ :- ಆದಿ
|| ನೀ ಮಾಯೆಯೊಳಗೋ | ನಿನ್ನೊಳು ಮಾಯೆಯೋ ||
ನೀ ದೇಹದೊಳಗೋ | ನಿನ್ನೊಳು ದೇಹವೋ ||
|| ನೀ ಮಾಯೆಯೊಳಗೋ ||
|| ಬಯಲು ಆಲಯದೊಳಗೋ | ಆಲಯವು ಬಯಲೊಳಗೋ ||
ಬಯಲು ಆಲಯಗಳೆರಡು | ನಯನದೊಳಗೋ ||
ನಯನ ಬುದ್ಧಿಗಳೆರಡು | ನಿನ್ನೊಳಗೋ | ಹರಿಯೇ ||
|| ನೀ ಮಾಯೆಯೊಳಗೋ ||
|| ಸವಿಯು ಸಕ್ಕರೆಯೊಳಗೋ | ಸಕ್ಕರೆಯು ಸವಯೊಳಗೋ ||
ಸವಿಯು ಸಕ್ಕರೆಯೆರಡು | ಜಿಹ್ವೆಯೊಳಗೋ ||
ಜಿಹ್ವೆ ಮನಸಿನೊಳಗೋ | ಮನಸು ಜಿಹ್ವೆಯೊಳಗೋ ||
ಜಿಹ್ವೆ ಮನಸುಗಳೆರಡು | ನಿನ್ನೊಳಗೋ | ಹರಿಯೇ ||
|| ನೀ ಮಾಯೆಯೊಳಗೋ ||
|| ಕುಸುಮದೊಳು ಗಂಧವೋ | ಗಂಧದೊಳು ಕುಸುಮವೋ ||
ಕುಸುಮ ಗಂಧಗಳೆರಡು | ಘ್ರಾಣದೊಳಗೋ ||
ಅಸಮಭವ ಕಾಗಿನೆಲೆ | ಆದಿಕೇಶವರಾಯ ||
ಉಸುರಲೆನ್ನಳವಲ್ಲ | ಎಲ್ಲ ನಿನ್ನೊಳಗೋ ||
|| ನೀ ಮಾಯೆಯೊಳಗೋ ||
0 ಕಾಮೆಂಟ್ಗಳು