ನಡೆದುಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ ಹಾಸುವೆ -Nadedu Bamma Lakshmi Ninage

|| ಲಕ್ಷ್ಮಿ ಹಾಡು ||



ನಡೆದುಬಾಮ್ಮ ಲಕ್ಷ್ಮಿ ನಿನಗೆ

ನಡೆಮುಡಿಯ ಹಾಸುವೆ ನಡೆಮುಡಿಯ

ಹಾಸಿ ನಾ ಚರಣ ಕಮಲಕ್ಕೆರಗುವೆ ॥ ಪ ||


ಮರುಗ ಮಲ್ಲಿಗೆ ಧವನ ಸಂಪಿಗೆ

ಸರಗಳನ್ನೆ ಪೂಜಿಪೆ

ಸರಗಳನ್ನೇ ಪೂಜಿಸಿ ನಾ

ವರಗಳನ್ನೇ ಬೇಡುವೆ    || ೧ ||


ಹೀರೆ ಕುಂಬಳಕಾಯಿ ಪಡವಲ

ಶಾಕ ಪಾಕವ ಮಾಡುವೆ 

ಸಣ್ಣ ಶಾವಿಗೆ ಭಕ್ಷವು ನೈವೇದ್ಯವು

ಪರಮಾನ್ನವು        ॥ ೨ ॥ 


ಎಷ್ಟು ಬೇಡಿದರೂ ದಯೆ ಏಕೆ

ಬರಲಿಲ್ಲ ಲಕ್ಷ್ಮಿ ನಿನಗೆ

ದಿಟ್ಟ ಪ್ರಸನ್ನ ವೆಂಕಟ ವಿಠ್ಠಲನ

ಪಟ್ಟದ ರಾಣಿಯೆ    ॥ ೩॥ 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು