Belaguru bhajan -- bandu ninthihanu nodi, kannada bhajan lyrics |
|| ಗುರು ಭಜನೆ ||
|| ಸದ್ಗುರು ಬಿಂದು ಮಾಧವರ ಸ್ತುತಿ ||
ರಾಗ :- ಮೋಹನ
ತಾಳ :- ಛಾಪು
|| ಪ || || ಬಂದು ನಿಂತಿಹನು ನೋಡಿ | ಬೆಲಗೂರ ಹನುಮ | ಬಿಂದುಮಾಧವನಾಗಿ ||
ಒಂದು ಘಳಿಗೆಯು ಬಿಡದೆ ಅವನ | ಹಿಂದೆ ಮುಂದೆ | ಭಕುತ ಗಣನ ||
ಚೆಂದದಿಂದಲಿ | ಅವರೊಡನೆ | ಆನಂದದಿಂದಲಿ | ನಗುತ ನಲಿಯುತ ||
೧ ವರ ಬ್ರಹ್ಮಚಾರಿಯು ತಾ | ಹಚ್ಚಿದ ಭಸ್ಮ | ಕುಂಕುಮಗಳ ತೇಜವಾ ||
ಕೊರಳೊಳಗೆ ರುದ್ರಾಕ್ಷಿ ಸ್ಫಟಿಕದ | ಸರವು ಮೆರೆಯುತ | ತೋರುತಿರ್ಪುದು ||
ಶಿರದ ಮೇಲಿನ | ಕೆಂಪು ಶಾಲದು | ಮಿರಮಿರನೆ ಮಿಂಚುತ್ತ ಹೊಳೆವುದು ||
೨. || ಶ್ರೀರಾಮ್ ಜೈರಾಮ್ ಜೈಜೈ ರಾಮ್ | ಎಂಬುವ ಮಹಾ ತಾರಕ ಮಂತ್ರವನು ||
ತಾರತಮ್ಯವ ಮಾಡದೇ | ತಾ ಸೇರಿದಾ ಸದ್ಭಕ್ತ ವೃಂದಕೆ ||
ಸಾರಿ ಉಪದೇಶವನು ನೀಡುತ | ಮೀರಿದಾನಂದವನು ಕೊಡುತಾ ||
೩. | ಬಂದಾ ಭಕ್ತರು ಎಲ್ಲಾ | ಪಾದಕೆ ನಮಿಸೆ | ಆದುದೇನೆಂದು ತಾನು ||
ಅಂದದಾ ಕರದಿಂದ ಅವರನು | ಚೆಂದದಾಶೀರ್ವದಿಸಿ ಎಬ್ಬಿಸಿ ||
ಬಂದ ದುರಿತವು ದೂರವಾಯಿತು | ಎಂದು ಹೇಳುತ ಹರುಷ ಕೊಡುತಾ ||
೪. . || ಬಲು ದೂರದಿಂದಲಿ ನಾವ್ | ಬಂದೇವೆನಲು | ನಲಿವಿಂದಾಲಯವ ತೋರಿಸಿ ||
ಜಲವು ಭೋಜನ ಮೊದಲು ಆಗಲಿ | ಬಳಿಕ ಬಂದಿಹ ವಿಷಯವರಿಯಿರಿ ||
ಕುಲದ ಮಾತಿಲ್ಲಿಲ್ಲ ಎನುತಲಿ|ಕಿಲಕಿಲನೆ ನಗಿಸುತ್ತ ನಲಿಸುತ ||
೫. ।। ಆಂಜನೇಯನ ಗುಡೀಲಿ । ಅನುದಿನವೂ । ಭಜನೆ ನಡೆವುದಲ್ಲಿ ।।
ಸುಜನರೆಲ್ಲರು ಸೇರಿ ಭಕುತಿಲಿ । ತಾಳ ತಂಬೂರಿಗಳ ಪಿಡಿದು ।।
ತ್ರಿಜಗ ವಂದ್ಯನ ನಾಮ ಪಾಡಲು । ಬೆಲಗೂರ್ ಹನುಮ ಮೃದಂಗ ನುಡಿಸುವ ।।
೬. || ಪ್ರತಿದಿನ ಭಜನೆಯನು | ತಪ್ಪದೇ ಮಾಡೆ | ಅತಿಶಯ ಶಕ್ತಿಯನು ||
ಮತಿವಂತ | ಬೆಲಗೂರ | ಹನುಮಂತ ತಾ ಕೊಡುವಾ ||
ಕ್ಷಿತಿಯೊಳು ಬಿಂದುಮಾಧವರೆಂಬೋ ಹೆಸರಿನಲಿ ||
0 ಕಾಮೆಂಟ್‌ಗಳು