ಬಿಡು ಬಿಡಿನ್ಯಾತರ ಜ್ಞಾನ - Bidu bidinyatara jnana

|| ತತ್ವ ಪದ ||

Belaguru swamiji, belaguru bhajan



ರಾಗ :- ಶಂಕರಾಭರಣ
ತಾಳ :- ಛಾಪು

| ಬಿಡು ಬಿಡಿನ್ಯಾತರ | ಜ್ಞಾನ |
ನಿನ್ನ ನಡೆನುಡಿಯೊಂದಾಗದೇ ಅಜ್ಞಾನ |
ಬಿಡು ಬಿಡಿನ್ಯಾತರ ಜ್ಞಾನ ||

| ಗುರುಭಕ್ತಿ ನೆಲೆಯಾಗಲಿಲ್ಲ | ನಾನೇ ಗುರುವೆಂದು ।
ಹಮ್ಮಿನಿಂದುರಿಯುವೆಯಲ್ಲಾ |
ಕರುಣಾ ಶಾಂತಿಯು ಸತ್ವವಿಲ್ಲ  ಕೆಟ್ಟ |
ಅರಿವರ್ಗ ಮದಹೆಚ್ಚಿ
ಮೆರೆಯುವೆಯಲ್ಲಾ ॥ ಬಿಡು |

| ಚದುರನೆಂದೆನಿಸಿ ಕೊಂಡಿರುವೆ | ದಿವ್ಯ | ಪದುಮನಂತೊಪ್ಪುವ ||
ಮುಖದಿ | ಶೋಭಿಸುವೆ |
ಮಧುರ ವಾಕ್ಯವನಾಡುತಿರುವೆ | ನಿನ್ನ ಹೃದಯದೊಳ್ ||
ಕತ್ತಿಯನಿಟ್ಟುಕೊಂಡಿರುವೆ | ಬಿಡು |

| ತನುವಿನಾಸೆಯ ಬಿಡಲಿಲ್ಲ | ಹೊಸ ಮನದ ಸಂಕಲ್ಪಗಳು |
ಬೋಳಾಗಲಿಲ್ಲ |
ಅನುಮಾನವನು ಬಿಡಲಿಲ್ಲ | ನಮ್ಮ ಗುರು ಮಹಾಲಿಂಗ ನೊಳ್ ||
ಸಮರಸವಿಲ್ಲ | ಬಿಡು ಬಿಡಿನ್ಯಾತರ .

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು