ಗುರುವಿನ ಮುಖದಿಂದ ಗುರುತು ಕಂಡವರಿಂದ -- Guruvina mukhadinda song lyrics in kannada

|| ಗುರು ಭಜನೆ ||

ರಾಗ :- ಶಂಕರಾಭರಣ
ತಾಳ :- ಛಾಪು

kannadabhajanlyrics.com
kannadabhajanlyrics.com, belaguru swamiji images



|| ಗುರುವಿನ ಮುಖದಿಂದ|ಗುರುತು ಕಂಡವರಿಂದ |
ಗುರಿ ನೋಡಿ ನೀ ಬಾಳೋ | ಕುರಿಯೇ ||
ಅರಿತವರನು ಕೂಡಿ | ಆದರವರಿಯದೇ |
ಬರಿದೇ ಬಳಲುವೆಯಲ್ಲೋ | ಕುರಿಯೆ ||
         || ಗುರುವಿನ ಮುಖದಿಂದ ||


|| ಅರ್ಥವನರಿಯದೇ | ವ್ಯರ್ಥ ಓದಿದರೇನು |
ಸಾರ್ಥಕವೆನಿಸುವುದೇ | ಕುರಿಯೇ ||
ಕೀರ್ತಿಗೆ ಬಳಲುವ | ಮೂರ್ಖ ನೀನಾಗದೇ |
ಖ್ಯಾತಿ ನೀನಾಗಲೋ | ಕುರಿಯೇ ||
     || ಗುರುವಿನ ಮುಖದಿಂದ ||


|| ಶೃತಿಯೊಳು ಸಾರವ | ಮತಿಯಿಟ್ಟು ತಿಳಿಯದೇ |
ಗತಿಗೆಟ್ಟು ಹೋದ್ಯಲ್ಲೋ |
ಶೃತಿಯೊಳುತ್ತಮ ಗುರು | ಚರಣವ ಕಾಣದೇ |
ಮತಿಗೆಟ್ಟು ಹೋದ್ಯಲ್ಲೋ | ಕುರಿಯೇ ||
         || ಗುರುವಿನ ಮುಖದಿಂದ ||


|| ಜ್ಞಾನ ಸ್ವರೂಪನೇ ನೀನೆಂದು ಹೇಳಿದ |
ಗುರುವನ್ನು ಸ್ಮರಿಸಲೋ | ಕುರಿಯೇ ||
ಅಜ್ಞಾನವ ಬಿಟ್ಟು ನಮ್ಮ | ಗುರು ಶಂಕರಾರ್ಯನ |
ನುಡಿಯಂತೆ ನಡೆಯಲೋ | ಕುರಿಯೇ ||
               || ಗುರುವಿನ ಮುಖದಿಂದ||

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು