| ಭಜನೆ |
ರಾಗ : ರಾಗಮಾಲಿಕೆ
ತಾಳ : ಆದಿ
||ಬಾರೋ ಕೃಷ್ಣಯ್ಯ ॥ ನಿನ್ನ ಭಕರ ಮನೆಗೀಗ ।
ರಂಗಯ್ಯ ॥ ||ಬಾರೋ ॥
೧ ॥ ಅಂದುಗೆ ಪಾಗಡವು । ಕಾಲಂದುಗೆ ಕಿರುಗೆಜ್ಜೆ ॥
ದಿಂಧಿಮಿ । ಧಿಮಿಧಿಮಿ । ಧಿಮಿರೆನುತಾ ॥
ಪೊಂಗಳಲಾನೂದುತಾ ॥ ಬಾರಯ್ಯ ॥ ಬಾರೋ ಕೃಷ್ಣಯ್ಯ
೨ ॥ ಕಂಕಣ ಕರದಲಿ | ಹೊನ್ನುಂಗುರ ಹೊಳೆಯುತ ॥
ಧಿ೦ಧಿಮಿ ಧಿಮಿಧಿಮಿ । ಧಿಮಿರೆನುತಾ ॥ ಕಂಕಣ ॥
ಪೊಂಗಳಲಾನೂದುತಾ ॥ ಬಾರಯ್ಯ ॥ ಬಾರೋ ಕೃಷ್ಣಯ್ಯ||
೩ ॥ ವಾಸ ಉಡುಪಿಲಿ ನೆಲೆಯಾದಿ ಕೇಶವನೇ ॥
ದಾಸಾ ನಿನ್ನ ಪಾದ ದಾಸ ।
ದಾಸಾ ನಿನ್ನ ಪಾದ ದಾಸ |ನಿನ್ನ ಪಾದ ದಾಸ ॥
ಬಾರೋ ಕೃಷ್ಣಯ್ಯ||
0 ಕಾಮೆಂಟ್‌ಗಳು