|| ಹರಿ ಸ್ತುತಿ ||
kannadabhajanlyrics.com |
ನರಸಿಂಹನ ಪಾದ ಭಜನೆಯ ಮಾಡೋ || ಪ ||
ನರಸಿಂಹನ ಪಾದ ಭಜನೆಯ ಮಾಡಲು
ದುರಿತ ಪರ್ವತವ ಖಂಡಿಸುವ ಕುಲಿಷದಂತೆ||ಅ.ಪ||
ತರಳನ ಮೊರೆ ಕೇಳಿ ತವಕದಿಂದಲಿ ಬಂದು
ದುರುಳನ ಕರುಳ ತನ್ನ ಕೊರಳಲಿ ಧರಿಸಿದ || ೧ ||
ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ
ವರ ಕಂಬದಿಂದ ಬಂದ ವೈಕುಂಠ ಪತಿ ನಮ್ಮ||೨||
ಹರ ವಿರಂಚಾದಿಗಳು ಕರವೆತ್ತಿ ಮುಗಿಯಲು
ಪರಮ ಶಾಂತನಾದ ಪುರಂದರವಿಠಲ || ೩ ||
ವಿಠಲಾ ವಿಠಲಾ ವಿಠಲಾ
0 ಕಾಮೆಂಟ್‌ಗಳು