ಜ್ಞಾನರಾಶಿ ಗೂಡು ಉಂಟು ಇವನ ಒಳಗಡೆ - Gnana Rashi Goodu Untu Ivana Valagade

|| ಶ್ರೀ ಬಿಂದುಮಾಧವ ಸ್ತುತಿ||

 ರಚನೆ :  ದೃವ ಕುಮಾರ್ ಅವಧಾನಿ (ದೃವಣ್ಣ)




ಜ್ಞಾನರಾಶಿ ಗೂಡು ಉಂಟು ಇವನ ಒಳಗಡೆ 

ಇವನ ಅರಿತು ನಡೆವಗೆ ಭವದಿ ಬಿಡುಗಡೆ 


ಬೇಡದೆಲ್ಲಾ ಮಾತ ಬಿಟ್ಟು ಸೇವೆ ಮಾಡುವ 

ಶಂಕೆ ಬಿಟ್ಟು ಇವನ ಪದಕೆ ಶರಣು ಅನ್ನುವ 

ತನ್ಮಯದಿ ತತ್ವ ಭಜನೆ ನಾವೂ ಮಾಡುವ 

ಲಜ್ಜೆ ಬಿಟ್ಟು ಇವನ ಜೊತೆಗೆ ಹೆಜ್ಜೆ ಹಾಕುವ 


ನಮ್ಮ ತನವ ಕಳಚಿ ಬಿಡುವ ಗುರುವೆ ದತ್ತನು 

ಮನವ ಹಣ್ಣು ಮಾಡಲಿವನು ನಾಮವಿತ್ತನು 

ನಾನು ನೀನು ಭೇದ ಕಳೆವ ಗುರುವೆ ಬಿಂದುವು 

ವರವ ಬೇಡದಂತೆ ಮಾಡ್ವ ಕರುಣಾ ಸಿಂಧುವು 


ಬರಿದೆ ಕೂಗೆ ಓಡಿಬರುವ ಗುರುವ ನಮಿಸಿರೊ 

ಭಕುತ ಜನಕೆ ಮುಕ್ತಿವೀವ ಗುರುವ ಸ್ಮರಿಸಿರೊ 

ಪರಮಾನಂದ ಇಲ್ಲಿ ಉಂಟು ಇವನ ಅರಿತಗೆ 

ಭವ ಸಾಗರ ದಾಟಿಪನು ಅರಿತ ಮುಗುಧಗೆ 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು