ಲಕ್ಷ್ಮಿ ಹಾಡು
kannadabhajanlyrics. com |
ಶೃಂಗಾರವಾಗಿಹಳು ಶ್ರೀ ಮಹಾಲಕ್ಷ್ಮಿ
ಬಂಗಾರು ಮಂಟಪದಿ ಬಂದು ಕುಳಿತಿಹಳು ||ಪ ||
ಎಡಬಲದಿ ಗಜಲಕ್ಷ್ಮಿ ನಡುವೆ ತಾವರೆ ಲಕ್ಷ್ಮಿ
ಭಾನುಕೋಟಿ ಪ್ರಭೆಯಂತೆ ಹೊಳೆಯುತಿಹಳು
ಬಿಳಿಯ ಸೀರೆಯನ್ನುಟ್ಟು ಜರಿಯ ಕುಪ್ಪಸ ತೊಟ್ಟು
ನಡೆ-ಮುಡಿಯ ಮೇಲೆ ತಾ ನಡೆದು ಬರುತಿಹಳು||1||
ಶುಕ್ರವಾರದ ದಿನದಿ ಅಕ್ಕರೆಯೊಳು ಲಕ್ಷ್ಮಿ
ಭಕ್ತರಿಗೆ ವರಗಳನು ಕೊಡುತ್ತಿಹಳು ಲಕ್ಷ್ಮಿ
ಅರ್ಥಿಯಿಂದಲಿ ತನ್ನ ಪೊಗಳುವ ಭಕ್ತರಿಗೆ
ಸತ್ಯ ಕಾಯುಷ್ಯವನು ಕೊಡುತಿಹಳು ಲಕ್ಷ್ಮಿ ||2||
ಶ್ರಾವಣ ಮಾಸದಲಿ ಪ್ರೇಮದಿಂದಲಿ ಲಕ್ಷ್ಮಿ
ನಾನೊಲಿದು ಬರುತಿಹಳು ಮನೆಗೆ ಲಕ್ಷ್ಮಿ
ಪ್ರೇಮದಿಂದಲಿ ರಂಗಧಾಮನ ಮಡದಿ ತಾ
ವಾಸವಾಗಿರುತಿಹಳು ಶ್ರೀ ಮಹಾಲಕ್ಷ್ಮಿ ||3||
ಕೊಲ್ಲಾಪುರದಿ ತಾ ನೆಲೆಸಿಹಳು ಲಕ್ಷ್ಮಿ
ಮೆಲ್ಲನೆ ವರಗಳನು ಕೊಡುತಿಹಳು ಲಕ್ಷ್ಮಿ
ಸಲ್ಲಲಿತಾಂಗಿಯರು ಸಡಗರದಿ ಬೇಡುತಿಹರು
ಮಾಂಗಲ್ಯ ಭಾಗ್ಯವನು ಕೊಡು ಮಹಾಲಕ್ಷ್ಮಿ ||4||
0 ಕಾಮೆಂಟ್‌ಗಳು