ಆಂಜನೇಯ ಸ್ವಾಮಿ ಸತತ ಭಜನ ನಿರತ - Anjaneya Swamy Sathatha bhajana niratha



 || ಆಂಜನೇಯ ಸ್ತುತಿ ||



 ಆಂಜನೇಯ ಸ್ವಾಮಿ ಸತತ ಭಜನ ನಿರತ

 ಆತ್ಮರಾಮ ಮುನಿ ಸೀತಾಪತಿ ದೂತ  || ಪ ||


 ಸಾಗರ ತರಣ ರಿಪುದಲ ಹರಣ

 ಸಜ್ಜನ ಭರಣ ನಮೋ ನಮೋ

 ವಾನರ ಪ್ರವರ ವಜ್ರ ಶರೀರ

 ಪವನ ಕುಮಾರ ನಮೋ ನಮೋ || ೧ ||


 ಲಕ್ಷ್ಮಣ ಪಾಲಕ ಲಂಕಾ ದಾಹಕ

 ಜಾನಕಿ ಮೋಹಕ ನಮೋ ನಮೋ

ಸಮ್ಯಕ್ ಸಾಧಕ ಪ್ರೇರಕ ಸೇವಕ

 ಆದರ್ಶಾತ್ಮಕ ನಮೋ ನಮೋ   || ೨ ||


 ಕಪಿಗಣ ಸೇವಿತ ತರುಣಾರಾಧಿತ

 ಕವಿವರ ಸಂಸ್ತುತ ನಮೋ ನಮೋ

 ಬುದ್ಧಿಮತಾಂ ವರ ಸಿದ್ದಿ ವರಾಗರ

ಸಮ್ಯಕ್ ಸುಂದರ ನಮೋ ನಮೋ  || ೩ ||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು