ಲಾಲಿ ಜೋ ಜೋ ಲಾಲಿ - Lali Jo Jo Laali

|| ಲಾಲಿ ಹಾಡು ||

ರಾಗಃ ಕುರಂಜಿ

ತಾಳ : ಅಟ್ಟತಾಳ 



ಲಾಲಿ ಜೋ ಜೋ ಲಾಲಿ | ಪಾರ್ವತೀ ಕಂದಾ |

ಲಾಲಿ ಜೋ ಜೋ ಲಾಲಿ । ಈಶ್ವರಾನಂದಾ ॥  ಲಾಲಿ :


ಸ್ವರ್ಣಮಯ ತೊಟ್ಟಿಲಲಿ | ಪವಡಿಸೋ ದೇವಾ |

ತೂಗುವೆನು ಹೇರೆಂಬ ! ಷಣ್ಮುಖಾನನುಜಾ ||  ಲಾಲಿ:


ಹುಟ್ಟಿದೊಡನೆಯೆ ಸ್ವಾಮಿ | ಅದ್ಭುತಾನಾಗಿ |

ತಂದೆಯೊಡನೆಯೆ ಮಲ್ಲ | ಯುದ್ಧವನು ಗೈದೆ ॥  ಲಾಲಿ:


ಲಾಲಿ ಜೋ ಜೋ ಲಾಲಿ | ರಮಣೀಯ ತೇಜಾ | 

ಲಾಲಿ ಜೋ ಜೋ ಲಾಲಿ | ವಿಶ್ವ ವಿಘ್ನೇಶ ॥   ಲಾಲಿ:


ಲಾಲಿ ಜೋ ಜೋ ಲಾಲಿ | ಅಂಬಿಕಾ ಕಾಂತಾ |

ಲಾಲಿ ಜೋ ಜೋ ಲಾಲಿ | ರಜತ ಗಿರಿವಾಸಾ ॥ ಲಾಲಿ:


ಲಾಲಿ ಜೋ ಜೋ ಲಾಲಿ | ರುದ್ರಾಕ್ಷಿಧಾರೀ |

ಲಾಲಿ ಜೋ ಜೋ ಲಾಲಿ | ವಿಷಕಂಠಧಾರೀ |  ಲಾಲಿ:


ಅದ್ಭುತಾರೂಪನಿಗೆ [ ಬ್ರಹ್ಮಾಂಡವೆಂಬೋ |

ತೊಟ್ಟಿಲಲಿ ತೂಗುವ | ಶಕ್ತಿ ನಮಗಿಲ್ಲಾ ॥    ಲಾಲಿ:


ತಂದೆಯನು ಮಕ್ಕಳು | ತೂಗುವುದು ಹೇಗೇ |

ತಾಯಿ ಗಿರಿಜೆಯು ನಿನ್ನ | ತೂಗುವಳು ಸ್ವಾಮೀ ॥ ಲಾಲಿ:


ಲಾಲಿ ಜೋ ಜೋ ಲಾಲೀ | ಕನಕಮಣಿ ಧಾರೀ |

ಲಾಲಿ ಜೋ ಜೋ ಲಾಲಿ! ಕಲ್ಕ್ಯಾವತಾರೀ ॥ ಲಾಲಿ:


ಲಾಲಿ ಜೋ ಜೋ ಲಾಲಿ | ರುಕ್ಮಿಣೀ ರಮಣ |

ಲಾಲಿ ಜೋ ಜೋ ಲಾಜಿ | ವೈಖಂಠ ಪತಿಯೇ ॥ ಲಾಲಿ:


ನಾರು ಸಾವಿರ | ಗೋಪಿಕಾಲೋಲಾ |

ನಾಟಕ ಸೂತ್ರ | ಧಾರಿ ಲಕ್ಷ್ಮೀಶಾ |    ಲಾಲಿ:


ಕನಕರತ್ನ ಪೀಠದಲಿ | ಸುಂದರಾನಾಗೀ |

ಅಂಕದಲಿ ಕಾಂತೆಯನು|ಧರಿಸಿರುವೆ ಸ್ವಾಮೀ |ಲಾಲಿ


ಲಾಲಿ ಜೋ ಜೋ ಲಾಲಿ | ಸ್ವರ್ಣಾಂಬೆ ತಾಯೇ |

ಲಾಲಿ ಜೋ ಜೋ ಲಾಲಿ | ಸುಜ್ಞಾನ ದಾಯೇ ॥ ಲಾಲಿ


ಲಾಲಿ ಜೋ ಜೋ ಲಾಲಿ | ಶ್ರೀಕಂಠದಯಿತೇ |

ಲಾಲಿ ಜೋ ಜೋ ಲಾಲಿ | ಪರಮ ಕಲ್ಯಾಣೀ ॥ ಲಾಲಿ


ನೀನೆ ನಮ್ಮೆಲ್ಲರಿಗು ತಾಯಿ | ಯಾಗಿರುವೇ |

ನಮ್ಮನೆಲ್ಲಾ ಸಲಹಿ | ತೊಟ್ಟಿಲಲಿ ತೂಗೂ ॥ಲಾಲಿ


ಬ್ರಹ್ಮಾಂಡವೆಲ್ಲವನು । ಧರಿಸಿರುವೆ ತಾಯೇ | ಪಶುರೂಪರಾಗಿರುವ | ನಮ್ಮಗಳ ಕಾಯೀ ॥ಲಾಲಿ


ಲಾಲಿ ಜೋ ಜೋ ಲಾಲೀ । ಕೋದಂಡ ಪಾಣೀ |

ಲಾಲಿ ಜೋ ಜೋ ಲಾಲಿ | ಕೌಸಲ್ಯ ತನಯಾ ॥ಲಾಲಿ


ಲಾಲಿ ಜೋ ಜೋ ಲಾಲಿ | ರಾಜಾಧಿರಾಜಾ |

ಲಾಲಿ ಜೋ ಜೋ ಲಾಲಿ | ಇಕ್ಷ್ವಕು ತಿಲಕ ॥ ಲಾಲಿ


ಗಾಳಿ ಮಳೆಯೆನ್ನದೇ । ಕಾಡಿನಲಿ ಅಲೆದೇ |

ಸೌಮಿತ್ರಿ ಸಹಿತ ನೀ | ರಾಕ್ಷಸರ ಕೊಂದೇ |ಲಾಲಿ


ಪಿತೃವಾಕ್ಕೆಪಾಲನಾ | ಧೀರೆ ಶ್ರೀರಾಮ |

ಮಾರ್ಗದರ್ಶಕನಾದೆ | ಜನಕಿಜಾರಮಣ ॥ಲಾಲಿ


ಲಾಲಿ ಚೋ ಜೋ ಲಾಲಿ | ಅಂಜನಾನಂದಾ |

ಲಾಖಿ ಚೋ ಜೋ ಲಾಲಿ|ಲೋಕಕಾನಂದಾ ||ಲಾಲಿ


ಲಾಲಿ ಜೋ ಜೋ ಲಾಲಿ | ರಾಮನಾಭಂಟಾ ॥ 

 ಲಾಲಿ ಜೋ ಜೋ ಲಾಲಿ ಲೋಕದಲಿ ತುಂಟಾ |ಲಾಲಿ



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು