ಬಂಧಿಸೆನ್ನ ನೀನಾದ ಕೋಟೆಯಲ್ಲಿ - Bandhisenna Neenada Koteyalli

 ಬಂಧಿಸೆನ್ನ ನೀನಾದ ಕೋಟೆಯಲ್ಲಿ 

ರಚನೆ : ಆರ್‌ ಕೆ ಪದ್ಮನಾಭ

ರಾಗ : ಅಭೇರಿ

ತಾಳ : ಆದಿ ತಾಳ 



ಬಂಧಿಸೆನ್ನ ನೀ ನಾದ ಕೋಟೆಯಲ್ಲಿ

ನಾದ ದೇವತೇ ಶ್ರೀ ಮಾತೇ ॥

ಸಂಗೀತದಾಅಂತರ್ಯ ಎಟುಕದಾಗಿದೆ ಎನಗೆ

ಶಾಸ್ತ್ರ ಜಟಿಲತೆಯ ಬಿಡಿಸಲಾಗದು ತಾಯೆ || 

ಸಕಲ ಸಾಧನೆಯನು ಮಾಡುತಿಹೆ ಮಾತೆ 

ಲಯ ಖಚಿತವಾದರೂ ನಾದ ಸೌಖ್ಯ ಸಿಗಲಿಲ್ಲ |

ಮಾತು ನೀನೆ ಧಾತುವು ನೀನೆ || 

ಸ್ವರವೂ ನೀನೆ ಲಯವೂ ನೀನೆ ||

ಕೃಪಾಹೀನನಾದ ಪದ್ಮನಾಭ ದಾಸಗೆ

ಗೀತೋಪದೇಶ ನೀಡಿ .... ಸಂಗೀತೋಪದೇಶ ನೀಡಿ 

ಪೊರೆಯೆ ಬೇಡವೆ ತಾಯೆ ॥।ಪ।। 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು