ದಾನವ ಕದಳಿಯ ಕಾನನ ಮುರಿಯುತ - Danava Kadaliya Kanana Muriyuta

|| ಹರಿ ಭಜನೆ ||



ದಾನವ ಕದಳಿಯ ಕಾನನ ಮುರಿಯುತ, 

ದಾನವ ಕದಳಿಯ ಕಾನನ ಮುರಿಯುತ 

ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಮ್ಮ ॥ ಪ ||


ಗುಂಗುರುಗುರುಳ ನೀಲಾಂಗ ಚೆಲ್ವಾನೆ 

ಕಂಗಳಿಗ ಹೊಳೆವ ವ್ಯಾಗ್ರಾಂಗುಳಿಯಾನೆ 

ಬಂಗಾರದನುಗಂಟೆ ಶೃಂಗಾರ ದಾನೇ 

ಮಂಗಳ ತಿಲಕದ ರಂಗಾನೆಂಬಾನೆ   ||1||


ಕೆಳದಿ ಗೋಪಿಯರೊಳು ಗೆಳೆತನದಾನೆ 

ಸುಲಭದಿನ್ದೊಲಿಯುವ ಎಳೆಮರಿಯಾನೆ 

ಘಲಿರು ಘಲಿರುರವದಿ ನಲಿದಾಡೋ ಆನೆ 

ಮರೆತವರೆದೆಮ್ಯಾಲೆ ತುಲಿದಾಡೋ ಆನೆ  ||2 ||


ನಳಿನಜ ಭವರಿಗೆ ಸಿಲುಕದ ಆನೆ ಒಲವಿಂದ ಭಕುತರ

ಸಲಹುವ ಆನೆ ಹಲವು ಕವಿಗಳಿಗೆ ನಿಲುಕದ ಆನೆ 

ಬಲ ಪ್ರಸನ್ನವೆಂಕಟ ನಿಲಯಾನೆಂಬಾನೆ  || 3 ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು