|| ಗಣಪತಿ ಸ್ತುತಿ ||
ಬೆನಕ ಬೆನಕ ಓ ಬೆನಕ
ಸಲಹೋ ನಮ್ಮ ಕೊನೆ ತನಕ ।|ಪ ||
ದೀನ ದಯಾಳು ನೀನಾಗಿ ಭಕ್ತರ ಬಾಳಿನ ಬೆಳಕಾಗಿ।
ಬೆನಕ ಓ ಬೆನಕ ... ಬೆನಕ ಓ ಬೆನಕ ||ಅ. ಪ.||
ವಿಘ್ನ ವಿನಾಶಕ ವಿಘ್ನಕಾರಕ
ವಿಘ್ನವ ಪರಿಹರಿಸೊ ವಿಶ್ವೇಶ್ವರ
ಸುತ ವಿಜಯ ವಿನಾಯಕ
ಸುಮತಿಯ ದಯಕರಿಸೋ ಹರಸುತ ನೀನು
ಹರಸುತ ಎಮ್ಮನು ಕರುಣದಿ ಕಾಪಾಡು
ಸ್ಮರಿಸುತ ನಿನ್ನಲಿ ತನುವನು ಎಮ್ಮನು
ಮೋಕ್ಷವ ನೀ ನೀಡು
ಬೆನಕ ಓ ಬೆನಕ ... ಬೆನಕ ಓ ಬೆನಕ ॥1॥
ಭಕ್ತಿಯ ಪುಷ್ಪವ ಅರ್ಪಿಸಿ ನಿನ್ನಲಿ ತನುಮನ
ತೋರಿಸುವೆ ಮುಕ್ತಿಯ ಮಾರ್ಗವ ತೋರದೆ
ಎಮ್ಮನು ಏತಕೆ ನೋಯಿಸುವೆ
ಭಕ್ತಿಯು ಮುಕ್ತಿಯು ಏನನು ಅರಿಯದ
ಅಸ್ಥಿರ ದೇಹವಿದು ಚಂಚಲ ಮನಸಿದು
ಎಂದಿಗೂ ಮರೆಯದ ನಿನ್ನಯ ಧ್ಯಾನ ಕೊಡು
ಬೆನಕ ಓ ಬೆನಕ ... ಬೆನಕ ಓ ಬೆನಕ ॥2॥
0 ಕಾಮೆಂಟ್‌ಗಳು