ನರಸಿಂಹ ಅಕ್ಷರಮಾಲೆ - Narasimha Aksharamale

 ನರಸಿಂಹ ಅಕ್ಷರಮಾಲೆ



ಜಯ ಜಯ ಲಕ್ಷ್ಮಿ ನರಸಿಂಹ

ಜಯ ಹರಿ ಲಕ್ಷ್ಮಿ ನರಸಿಂಹ

ಅನಾಥರಕ್ಷಕ ನರಸಿಂಹ |

ಆಪತ್ಬಾಂಧವ ನರಸಿಂಹ

 ಇಷ್ಟಾರ್ಥ ಪ್ರದ ನರಸಿಂಹ |

ಈಶ ಪರೇಶ ನರಸಿಂಹ || ೧.


 ಉಗ್ರ ಸ್ವರೂಪ ನರಸಿಂಹ |

ಊರ್ಧ್ವ ಬಾಹು ನರಸಿಂಹ

 ಎಲ್ಲಾ ರೂಪ ನರಸಿಂಹ |

ಐಶ್ವರ್ಯ ಪ್ರದ ನರಸಿಂಹ || ೨.


ಓಂಕಾರ ರೂಪ ನರಸಿಂಹ |

ಔಷಧ ನಾಮ ನರಸಿಂಹ

 ಅಂಬರ ವಾಸ ನರಸಿಂಹ |

ಕಾಮಜನಕ ನರಸಿಂಹ || ೩.


ಕಿರೀಟಧಾರಿ ನರಸಿಂಹ |

ಖಗಪತಿವಾಹನ ನರಸಿಂಹ ||

ಗದಾಧರನೇ ನರಸಿಂಹ |

ಗರ್ಭ ನಿರ್ಭೇದನ ನರಸಿಂಹ || ೪.


ಗಿರಿಧರವಾಸ ನರಸಿಂಹ |

ಗೌತಮಪೂಜಿತ ನರಸಿಂಹ |

ಫಟಕಾಚಲ ಶ್ರೀನರಸಿಂಹ |

ಚತುರ್ಭುಜನೆ ನರಸಿಂಹ || ೫.


ಚತುರಾಯುಧಧರ ನರಸಿಂಹ |

ಜ್ಯೋತಿಸ್ವರೂಪ ನರಸಿಂಹ |

ತಂದೆ ತಾಯಿಯು ನರಸಿಂಹ |

ತ್ರಿನೇತ್ರಧಾರಿ ನರಸಿಂಹ || ೬.


ಧನುಜಮರ್ದನ ನರಸಿಂಹ |

ದೀನನಾಥ ನರಸಿಂಹ |

ದುಖನಿವಾರಕ ನರಸಿಂಹ |

ದೇವಾದಿದೇವ ನರಸಿಂಹ || ೭.


ಜ್ಞಾನಪ್ರದನೆ ನರಸಿಂಹ |

ನರಸಿಂಹ ರೂಪ ನರಸಿಂಹ |

ನರನಾರಾಯಣ ನರಸಿಂಹ |

ನಿತ್ಯಾನಂದ ನರಸಿಂಹ || ೮.


ನರಮೃಗರೂಪ ನರಸಿಂಹ |

ನಾಮಗಿರೀಶ ನರಸಿಂಹ |

ಪಂಕಜಾಜನನ ನರಸಿಂಹ |

ಪಾಂಡುರಂಗ ನರಸಿಂಹ || ೯.



ಪ್ರಹ್ಲಾದವರದ ನರಸಿಂಹ |

ಪಿನಾಕಧಾರಿ ನರಸಿಂಹ |

ಪುರಾಣಪುರುಷ ನರಸಿಂಹ |

ಭವಭಯಹರಣ ನರಸಿಂಹ || ೧0.


ಭಕ್ತಜನಪ್ರಿಯ ನರಸಿಂಹ |

ಭಕ್ತೋದ್ಧಾರ ನರಸಿಂಹ |

ಭಕ್ತಾನುಗ್ರಹ ನರಸಿಂಹ |

ಭಕ್ತರಕ್ಷಕ ನರಸಿಂಹ || ೧೧.


ಮುನಿಜನಸೇವಿತ ನರಸಿಂಹ |

ಮೃಗರೂಪಧಾರಿ ನರಸಿಂಹ |

ಯಜ್ಞಪುರುಷ ನರಸಿಂಹ |

ರಂಗನಾಥ ನರಸಿಂಹ || ೧೨.


ಲಕ್ಷ್ಮೀರಮಣ ನರಸಿಂಹ |

ವಂಕಿಪುರೀಶ ನರಸಿಂಹ |

ಶಾಂತಮೂರ್ತಿ ನರಸಿಂಹ |

ಷಡ್ಬರ್ಗಾರಿ ನರಸಿಂಹ || ೧೩.


ಸರ್ವಮಂಗಳ ನರಸಿಂಹ |

ಸಿದ್ಧಿ ಪುರುಷ ನರಸಿಂಹ |

ಸಂಕಟಹರಣ ನರಸಿಂಹ |

ಸಾಲಿಗ್ರಾಮ ನರಸಿಂಹ || ೧೪.


ಹರಿನಾರಾಯಣ ನರಸಿಂಹ |

ಕ್ಷೇಮಕಾರಿ ನರಸಿಂಹ |

ಜಯಜಯ ಲಕ್ಷ್ಮೀನರಸಿಂಹ |

ಜಯ ಶುಭಮಂಗಳ ನರಸಿಂಹ || ೧೫.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು