|| ಗಣಪತಿ ಸ್ತುತಿ ||

 ರಾಗ : ಹಂಸಧ್ವನಿ




ಏಕ ದಂತಂ ಶೂರ್ಪಕರ್ಣಂ |

ವಿಘ್ನರಾಜಂ | ವಿಘ್ನೇಶ್ವರಂ |

ವಕ್ರತುಂಡಂ | ಈಶಪುತ್ರಂ ||

ತಂ ಗಣೇಶ ಪ್ರಣಮಾಮ್ಯಹಮ್  ||ಪ||


ಗೌರಿತನಯ | ವಿದ್ಯಾಗಣಪತಿ |

ಜಯಗಣೇಶ | ಗಜಾನನ ||

ಶಿವಕುಮಾರ | ಪಾರ್ವತಿ ನಂದನ |

ಸ್ಕಂದ ಸಹೋದರ ಗಜಾನನ || ಅ ಪ।।



ನಿನ್ನ ಸ್ಮರಣೆಯಲಿ ಬೆಳಗಾಗುತಿದೆ |

ನಿನ್ನ ಧ್ಯಾನದಲಿ ದಿನಕಳೆಯುತಿದೆ ||

ನಿನ್ನ ಗಾನದಲಿ ಮೈ ಮರೆಯುತಿದೆ||

ನಿನ್ನ ಭಜನೆಯಲಿ ಮನ ನಗುತಲಿದೆ II೧II


ನಿನ್ನ ನಾಮದಲಿ ಎಂತಹ ಸ್ಫೂರ್ತಿ |

ಉಲಿಯಲು ಹೆಸರನು ಎಂತಹ ಶಕ್ತಿ |

ಬಣ್ಣಿಸಲಸದಳ ನಿನ್ನಯ ಕೀರ್ತಿ |

ವಿಘ್ನೇಶ್ವರ ನಿನ್ನ ಹರಕೆಯಲಿ ಮುಕ್ತಿ II೨II


ನಿನ್ನ ಸ್ಮರಿಸಲು ಕಾರ್ಯಗಳೆಲ್ಲಾ |

ಕ್ಷಣದಲಿ ನಿಂತು ನಡೆಸುವ ಎಲ್ಲಾ |

ಅದರಾಗಿಸಿ ನನ್ನ ತನು ಮನ ಎಲ್ಲಾ |

ಬಿಡಿಸಿ ಬಿಡುವೆ ಬಂಧಗಳೆಲ್ಲಾ ||೩||



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು