ಜಯ ಜಯ ಮೂಷಕ ಗಮನ - Jaya Jaya Mushaka Gamana

||ಗಣಪತಿ ಭಜನೆ ||

 ರಾಗ : ಅಭೇರಿ




ಜಯ ಜಯ ಮೂಷಕ ಗಮನ

ಜಯ ಜಯ ಗಜಾನನ

ಜಯ ಜಯ ನಾಗಾಭರಣ

ಜಯ ಏಕದಂತ ಜಯ ಜಯ ||ಪ||


ಮತಿಯ ಕೊಡು, ಪಾರ್ವತಿಯ, ನಿಜ ತನುಜನೆ

ಬಿಡದೇ ನಿನ್ನನು ಸ್ತುತಿಸುವೆ ಕ್ಷಿತಿಯೊಳಗೆ

ಶ್ರೀ ಲಕುಮೀ ಪತಿಯ ಕೊಂಡಾಡಿ

ಸದ್ಗತಿಯ ಪಡೆವುದಕೆ ಸಾರಥಿಯಾಗೋ II೧I|


ಆಕಾಶದಭಿಮಾನಿ ಅಂಗಜನ ಚಾಪ

ನಿರಾಕರಿಸಿ ಬಿಸುಟ ಲಂಬೋದರನೆ

ಏಕಪಿಂಗಾದಿಗಳ ಹಸ್ತ ಚತುಷ್ಟ ಲೋಕದೊಳ್

ಭಜಿಸುವವರ ವಿದ್ಯಾನಿಧಿಯೆ II೨II



ಸೀತಾರಮಣನಿಂದ ಪೂಜಿತನಾಗಿ

ನದಿತೀರದಲಿ ಮೆರೆವ ಗಣೇಶ

ಸೇತು ಮಾಧವ ವಿಜಯ, ವಿಠಲರಾಯನ,

ದೂತನು ನೀನೇ ಪಾಶಾಂಕುಶಧರನೆ ||೩||




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು