|| ಗಣಪತಿ ಸ್ತುತಿ ||
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ ||ಪ||
ಭಾದ್ರಪದ ಶುಕ್ಲದಾ ಚೌತಿ ಯಂದು
ನೀ ಮನೆ ಮನೆಗೂ ದಯ ಮಾಡಿ ಹರಸು ಎಂದು
ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ್ಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾ ಸಿಂಧು||೧||
ಈರೇಳು ಲೋಕದ ಅಣುವಣುವಿನಾ
ಇಹ ಪರದಾ ಸಾಧನಕೆ ನೀ ಕಾರಣ
ನಿನ್ನೊಲುಮೆನೋಟದಾ ಒಂದು ಹೊನ್ನ ಕಿರಣಾ
ನೀವಿದರೆ ಸಾಕಯ್ಯಾ ಜನ್ಮ ಪಾವನ ||೨||
ಪಾರ್ವತಿ ಪರ ಶಿವನಾ ಪ್ರೇಮ ಪುತ್ರನೆ
ಪಾಲಿಸುವಾ ಪರ ದೈವಾ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದ ಸೇವೆ ಒಂದೇ ಧರ್ಮ ಸಾಧನ ||೩||
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದ ವರ ಪಾಲಿನ ಕಲ್ಪತರು ನೀನೆ
0 ಕಾಮೆಂಟ್‌ಗಳು