ಪಾರ್ವತಿ ವರಸುತ ಗಜಾನನ Parvathi Varasutha Gajanana

|| ಗಣಪತಿ ಸ್ತುತಿ ||

ರಾಗ : ಪಂತುವರಾಳಿ 





ಪಾರ್ವತಿ ವರಸುತ ಗಜಾನನ

ಪಾಲಿಸು ಎನ್ನನು ಗಜಾನನ || ಪ ||


ಪಾಶಾಂಕುಶಧರ ಪಾಪವಿಮೋಚನ |

ರಕ್ಷಿಸು ಎನ್ನನು ಗಜಾನನ || ೧ ||


ಲಂಬೋದರನೆ ನಂಬಿದೆ ನಿನ್ನನು |

ಬೆಂಬಿಡಬೇಡವೋ ಗಜಾನನ  ||೨ ||


ವರರಂಗ ವಿಠಲನ ಸ್ಮರಣೆಯ ಮಾಡುವೇ

ಕೈ ಬಿಡ ಬೇಡವೋ ಗಜಾನನ || ೩ ||


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು